alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಬ್ಯಾನ್ ಆದೇಶದಿಂದ ಯೂ ಟರ್ನ್ ಹೊಡೆಯುತ್ತಾ ಮಹಾರಾಷ್ಟ್ರ…?

ಕೆಲ ದಿನಗಳ ಹಿಂದಷ್ಟೇ ಎಲ್ಲಾ ಬಗೆಯ ಪ್ಲಾಸ್ಟಿಕ್ ಬಳಕೆ, ಉತ್ಪಾದನೆ, ಮಾರಾಟ, ಸರಬರಾಜಿನ ಮೇಲೆ ನಿಷೇಧ ಹೇರಿದ್ದ ಮಹಾರಾಷ್ಟ್ರ ಸರ್ಕಾರ ಶೀಘ್ರದಲ್ಲೇ ಆದೇಶ ಹಿಂಪಡೆಯುವ ಎಲ್ಲಾ ಸಾಧ್ಯತೆಗಳು ಇವೆ.

ಪ್ಲಾಸ್ಟಿಕ್ ನಿಷೇಧದಿಂದ ಉಂಟಾಗ್ತಿರೋ ಅಡ್ಡ ಪರಿಣಾಮವನ್ನ ತಡೆದುಕೊಳ್ಳುವಲ್ಲಿ ಜನಸಾಮಾನ್ಯರು ತೊಂದರೆಗೆ ಸಿಲುಕಿರುವುದೇ ಇದಕ್ಕೆ ಕಾರಣ. ಪ್ಲಾಸ್ಟಿಕ್ ನಿಷೇಧದಿಂದ ದೈನಂದಿನ ಜೀವನಕ್ಕೆ ಒಗ್ಗಿಕೊಳ್ಳೋಕೆ ವ್ಯಾಪಾರಿಗಳಿಗೆ ಕಷ್ಟವಾಗ್ತಿದೆ. ಅದರಲ್ಲೂ ಮೀನು ಮಾರಾಟ ಮತ್ತು ಮಾಂಸಾಂಹಾರ ಉತ್ಪನ್ನ ವ್ಯಾಪಾರಿಗಳು ಪ್ಲಾಸ್ಟಿಕ್ ಕವರ್ ಗಳಿಲ್ಲದೆ ಪರದಾಡುತ್ತಿದ್ದಾರೆ.

ಗ್ರಾಹಕರಿಗೆ ಬ್ಯಾಗ್ ಗಳನ್ನು ತರೋದಕ್ಕೆ ಹೇಳ್ತಿರೋದ್ರಿಂದ ವ್ಯಾಪಾರ ವಹಿವಾಟಿಗೂ ಹೊಡೆತ ಬಿದ್ದಿದೆ. ಮಹಾರಾಷ್ಟ್ರದ ವ್ಯಾಪಾರ ಮಂಡಳಿ ಸದಸ್ಯರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನ ಭೇಟಿಯಾಗಿ ತಮಗಾಗ್ತಿರೋ ತೊಂದರೆಯನ್ನ ವಿವರಿಸಿದ್ದಾರೆ. ಸಭೆಯ ಬಳಿಕೆ ಇನ್ನು ಮೂರು ತಿಂಗಳಲ್ಲಿ ಪ್ಲಾಸ್ಟಿಕ್ ಬಳಕೆ ಮೇಲಿನ ನಿಷೇಧದಲ್ಲಿ ಕೊಂಚ ಮಾರ್ಪಾಡುಗಳನ್ನ ತರೋದಕ್ಕೆ ಫಡ್ನವೀಸ್ ಚಿಂತನೆ ನಡೆಸಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...