alex Certify
ಕನ್ನಡ ದುನಿಯಾ       Mobile App
       

Kannada Duniya

ಗಿನ್ನಿಸ್ ದಾಖಲೆ ಸೇರಿದ ಮಹಾರಾಷ್ಟ್ರದ ‘ಬಂಗಾರದ ಮನುಷ್ಯ’

golden manಮಹಾರಾಷ್ಟ್ರದ ‘ಬಂಗಾರದ ಮನುಷ್ಯ’ ಎಂದೇ ಖ್ಯಾತರಾಗಿರುವ ಪಂಕಜ್ ಪಾರಖ್ ಅವರ ಹೆಸರು ಈಗ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರಿದೆ. ಅದಕ್ಕೆ ಕಾರಣವಾಗಿರುವುದು ಅವರು ಧರಿಸುವ ಶರ್ಟ್ ಎಂದರೇ ನಿಮಗೆ ಅಚ್ಚರಿಯಾಗಬಹುದು.

ಹೌದು. ಬಂಗಾರ ಪ್ರಿಯರಾದ ಪಂಕಜ್ ಪಾರಖ್ ಎರಡು ವರ್ಷಗಳ ಹಿಂದೆ ನಡೆದ ತಮ್ಮ 45 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಂಪೂರ್ಣ ಬಂಗಾರದಿಂದಲೇ ತಯಾರಿಸಿದ್ದ ಶರ್ಟ್ ಒಂದನ್ನು ಸಿದ್ದ ಮಾಡಿಸಿದ್ದರು. 4.10 ಕೆ.ಜಿ. ತೂಗುವ ಈ ಶರ್ಟ್ ಗೆ ಅಂದು  98,35,099 ರೂ. ತಗುಲಿತ್ತು. ಈಗ ಬಂಗಾರದ ಮೌಲ್ಯದಲ್ಲಿ ಏರಿಕೆಯಾಗಿರುವ ಕಾರಣ ಶರ್ಟ್ ಮೌಲ್ಯ 1.30 ಕೋಟಿ ರೂ. ಗಳೆಂದು ಹೇಳಲಾಗಿದೆ.

ಅವರ ಈ ಶರ್ಟ್ ಈಗ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ. ಪಂಕಜ್ ಪಾರಖ್ ಕೇವಲ ಬಂಗಾರದ ಶರ್ಟ್ ಧರಿಸುವುದು ಮಾತ್ರವಲ್ಲ ಬಂಗಾರದ ವಾಚ್, ಕುತ್ತಿಗೆಗೆ ದಪ್ಪ ದಪ್ಪ ಚೈನ್ ಗಳು, ಕೈಗೆ ಬ್ರೇಸ್ ಲೆಟ್, ಬಂಗಾರದ ಕನ್ನಡಕ ಹಾಕಿಕೊಂಡು ಸಂಪೂರ್ಣ ಬಂಗಾರಮಯವಾಗಿರುತ್ತಾರೆ. ಬಾಲ್ಯದಿಂದಲೇ ತಮಗೆ ಬಂಗಾರದ ಗೀಳಿತ್ತು ಎಂದು ಹೇಳುವ ಅವರು, ತಮ್ಮನ್ನು ರಕ್ಷಿಸಿಕೊಳ್ಳಲು ಇಬ್ಬರು ಬಾಡಿಗಾರ್ಡ್ ಗಳನ್ನು ನೇಮಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...