alex Certify
ಕನ್ನಡ ದುನಿಯಾ       Mobile App
       

Kannada Duniya

ಕರೆಂಟ್ ಬಿಲ್ ಕಂಡು ಕಂಗಾಲಾದ ತರಕಾರಿ ವ್ಯಾಪಾರಿ ನೇಣಿಗೆ ಶರಣು

8.64 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದದ್ದನ್ನು ನೋಡಿದ ತರಕಾರಿ ವ್ಯಾಪಾರಿಯೊಬ್ಬ ಆಘಾತಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

40 ವರ್ಷದ ತರಕಾರಿ ವ್ಯಾಪಾರಿ ಜಗನ್ನಾಥ್ ಶೆಲ್ಕೆ ಎಂಬಾತನಿಗೆ ಏಪ್ರಿಲ್ ತಿಂಗಳಿನ ವಿದ್ಯುತ್ ಬಿಲ್ ಬರೋಬ್ಬರಿ 8.64 ಲಕ್ಷ ರೂಪಾಯಿ ಬಂದಿದೆ. ಭಾರತ್ ನಗರದಲ್ಲಿ ಎರಡು ರೂಂ ಗಳಿರುವ ಟಿನ್ ಶೆಡ್ ನಲ್ಲಿ ಪತ್ನಿಯೊಂದಿಗೆ ಕಳೆದ 20 ವರ್ಷಗಳಿಂದ ವಾಸಿಸುತ್ತಿದ್ದ ಜಗನ್ನಾಥ್ ಗೆ ಏಕಾಏಕಿ ದೊಡ್ಡ ಮೊತ್ತದ ಬಿಲ್ ನೋಡಿ ಶಾಕ್ ಆಗಿದೆ. ಈ ಆಘಾತ ತಾಳಲಾರದೇ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೊನೆಗೆ ನೋಡಲಾಗಿ ಇದು ಬಿಲ್ ನೀಡಲು ಬಂದಿದ್ದ ಕ್ಲರ್ಕ್ ನಿಂದಾಗಿ ತಪ್ಪಾಗಿತ್ತು. ಮೀಟರ್ ರೀಡಿಂಗ್ 61,178 ಕೆಡಬ್ಲ್ಯೂಹೆಚ್ ಎಂದು ಹಾಕುವ ಬದಲು ಆತ 6,117.8 ಕೆಡಬ್ಲ್ಯೂಹೆಚ್ ಎಂದು ಹಾಕಿದ್ದು ಬಿಲ್ 8 ಲಕ್ಷ ಬಂದಿದೆ. ಆದರೆ ಯಾರೋ ಮಾಡಿದ ತಪ್ಪಿಗೆ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡಿದ್ದು ದುರಂತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...