alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಧನ ದರ ಏರಿಕೆಗೆ ಮಹಾ ಸಿಎಂ ಹೇಳಿದ್ದೇನು…?

ಮಹಾರಾಷ್ಟ್ರದಲ್ಲಿನ ಪೆಟ್ರೋಲ್ ಹಾಗೂ ಡಿಸೇಲ್ ದರ ದೇಶದಲ್ಲಿಯೇ ಅತಿ ಹೆಚ್ಚು. ಸ್ಥಳೀಯ ತೆರಿಗೆಗಳು ದುಬಾರಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದು, ಇದೀಗ ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೌನ ಮುರಿದಿದ್ದಾರೆ. ಇಂಧನ ಬೆಲೆ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ ಎಂದು ಫಡ್ನವೀಸ್‌ ತಿಳಿಸಿದ್ದಾರೆ.

ಪೆಟ್ರೋಲ್‌ ಹಾಗೂ ಡೀಸಲ್‌ನ್ನು ಜಿಎಸ್‌ಟಿಯಡಿ ತರುವುದು ತೈಲ ಬೆಲೆ ನಿಯಂತ್ರಣಕ್ಕೆ ಇರುವ ಒಂದು ಉಪಾಯ. ರಾಜ್ಯ ಸರಕಾರ ಬೆಲೆ ನಿಯಂತ್ರಣ ನಿಟ್ಟಿನಲ್ಲಿ ವಿವಿಧ ಮಾರ್ಗೋಪಾಯಗಳನ್ನು ಚರ್ಚಿಸುತ್ತಿದೆ. ಒಂದು ವೇಳೆ ಜಿಎಸ್‌ಟಿ ಮಂಡಳಿಯಲ್ಲಿ, ಇಂಧನವನ್ನೂ ಸೇರಿಸುವ ಪ್ರಸ್ತಾವನೆ ಬಂದಲ್ಲಿ ರಾಜ್ಯ ಅದನ್ನು ಬೆಂಬಲಿಸಲಿದೆ ಎಂದು ಅವರು ಹೇಳಿದ್ದಾರೆ.

ಎನ್‌ಡಿಎ ಸರಕಾರದ ಮೊದಲ ಮೂರು ವರ್ಷದಲ್ಲಿ 13 ಬಾರಿ ತೈಲ ದರ ಇಳಿಕೆಯಾಗಿತ್ತು. ಇದು ಭಾರತದ ನಿಯಂತ್ರಣದಲ್ಲಿ ಇರುವುದಿಲ್ಲ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಹೆಚ್ಚಿದೆ. ಕಾಂಗ್ರೆಸ್‌ಗೆ ಈಗ ಬೆಲೆ ಏರಿಕೆಯನ್ನು ಗುರಿಯಾಗಿಸುತ್ತಿದೆ. ಕಾಂಗ್ರೆಸ್ ಮುಂದಾಳತ್ವವಿರುವ, ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿರುವ ರಾಜ್ಯದಲ್ಲಿ ತೆರಿಗೆ ಇಳಿಸಲು ಕ್ರಮ ಕೈಗೊಳ್ಳಲಿ ಎಂದು ಅವರು ಟೀಕೆಗಳಿಗೆ ಉತ್ತರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...