alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಬಳಿ ದೋಣಿ ದುರಂತ : ನಾಲ್ವರು ಮಕ್ಕಳ ಸಾವು

ಮುಂಬೈನಲ್ಲಿ ದೋಣಿ ಮಗುಚಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ದಹನು ಎಂಬಲ್ಲಿ ಈ ದುರಂತ ಸಂಭವಿಸಿದೆ. ದೋಣಿಯಲ್ಲಿ 40 ಶಾಲಾ ಮಕ್ಕಳಿದ್ರು. ಓವರ್ ಲೋಡ್ ನಿಂದಾಗಿ ದೋಣಿ ನೀರಿನಲ್ಲಿ ಮಗುಚಿಕೊಂಡಿದೆ ಅಂತಾ ಹೇಳಲಾಗ್ತಿದೆ.

25 ಮಕ್ಕಳನ್ನು ಈಗಾಗ್ಲೇ ರಕ್ಷಣೆ ಮಾಡಲಾಗಿದೆ. ಕಾರ್ಯಾಚರಣೆಗಾಗಿ ದಮನ್ ನಿಂದ ಡ್ರೋನ್ ವಿಮಾನ ಮತ್ತು ಹೆಲಿಕಾಪ್ಟರ್ ಗಳನ್ನು ಕರೆಸಲಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಕರಾವಳಿ ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸ್ತಿದ್ದಾರೆ.

ಮುಂಬೈನಿಂದ 110 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಜನವರಿ 1ರಂದು ಬಿಹಾರದಲ್ಲಿ ಕೂಡ ಇಂಥದ್ದೇ ದುರಂತ ನಡೆದಿತ್ತು. ಭಾಗಲ್ಪುರ ಜಿಲ್ಲೆಯಲ್ಲಿ ನದಿಯಲ್ಲಿ ದೋಣಿ ಮುಳುಗಿ ಮೂವರು ಮಕ್ಕಳು ನಾಪತ್ತೆಯಾಗಿದ್ರು. 6 ಮಂದಿ ಸುರಕ್ಷಿತವಾಗಿ ಈಜಿ ದಡ ಸೇರಿದ್ದರು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...