alex Certify
ಕನ್ನಡ ದುನಿಯಾ       Mobile App
       

Kannada Duniya

ಬಾರ್ ಗಲಾಟೆಯಲ್ಲಿ ಪೊಲೀಸ್ ಪೇದೆಯ ಹತ್ಯೆ

ಬಾರ್ ನಲ್ಲಿ ನಡೆದ ಗಲಾಟೆಯೊಂದರಲ್ಲಿ ಮೂವರು ದುಷ್ಕರ್ಮಿಗಳು ಪೊಲೀಸ್ ಪೇದೆಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸಾಂಗ್ಲಿ ಜಿಲ್ಲೆಯ ಕುಪ್ವಾಡದಲ್ಲಿರುವ ಬಾರ್ ನ ಬಳಿ ಕ್ಷುಲ್ಲಕ ಕಾರಣಕ್ಕೆ ಪೇದೆ ಮತ್ತು ಮೂವರ ನಡುವೆ ಗಲಾಟೆ ನಡೆದಿದ್ದು, ಸಮಾಧಾನ್ ಮಂತೆ ಎಂಬ ಪೊಲೀಸ್ ಪೇದೆಯ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ.

ಕರ್ತವ್ಯ ನಿರತನಾಗಿದ್ದ ವೇಳೆಯಲ್ಲಿ ಪೊಲೀಸ್ ಪೇದೆ ಕೊಲೆ ನಡೆದಿದೆ. ಬಾರ್ ಒಂದರ ಬಳಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಮೂವರು ದುಷ್ಕರ್ಮಿಗಳನ್ನು ಪೊಲೀಸ್ ಪೇದೆ ಪ್ರಶ್ನೆ ಮಾಡಿದ್ದರು. ಈ ಸಂಬಂಧ ಆ ಮೂವರು ಸಮಾಧಾನ್ ವಿರುದ್ಧವೇ ತಿರುಗಿಬಿದ್ದರು. ಇದರ ನಡುವೆ ತೆರಳಿದ ಒಬ್ಬ ಚೂಪಾದ ಆಯುಧವನ್ನು ಹಿಡಿದು ತಂದು ಸಮಾಧಾನ್ ಅವರ ಹೊಟ್ಟೆ, ಎದೆ ಮತ್ತು ತಲೆಯ ಭಾಗದಲ್ಲಿ ಹಲ್ಲೆ ನಡೆಸಿದ್ದಾನೆ.

ಇದರಿಂದ ಸ್ಥಳದಲ್ಲೇ ಕುಸಿದು ಬಿದ್ದ ಪೊಲೀಸ್ ಪೇದೆಯನ್ನ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಾರ್ ಸಿಸಿ ಟಿವಿ ಫುಟೇಜ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...