alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ರೈತರ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಸಾಲ ಪಡೆದ ಉದ್ಯಮಿ

ಮಹಾರಾಷ್ಟ್ರದ ಉದ್ಯಮಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 5400 ಕೋಟಿ ರೂಪಾಯಿಗೂ ಮೀರಿದ ಸಾಲವನ್ನು ವಿವಿಧ ಬ್ಯಾಂಕ್ ಗಳಿಂದ ಪಡೆದಿರುವುದಾಗಿ ಬುಧವಾರ ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ ಧನಂಜಯ್ ಮುಂಡೆ ಆರೋಪಿಸಿದ್ದಾರೆ.

ಪ್ರಭಾನಿ ಜಿಲ್ಲೆಯ ಗಂಗಾಖೇಡ್ ಶುಗರ್ ಆ್ಯಂಡ್ ಎನರ್ಜಿ ಲಿ. ಸಂಸ್ಥೆಯ ನಿರ್ದೇಶಕ ರತ್ನಾಕರ್ ಗುತ್ತೆ ಎಂಬ ಉದ್ಯಮಿ, ಉಳುಮೆ ಮತ್ತು ಸಾಗಣೆ ಯೋಜನೆ ಅಡಿ 600 ಕ್ಕೂ ಹೆಚ್ಚು ರೈತರ ಹೆಸರಿನಲ್ಲಿ ಬ್ಯಾಂಕ್ ಸಾಲ ಪಡೆದಿದ್ದಾರೆ. ಅಲ್ಲದೆ 22 ನಕಲಿ ಕಂಪನಿಗಳ ಹೆಸರಲ್ಲಿ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾರೆ ಎಂದು ಮುಂಡೆ ಆರೋಪಿಸಿದ್ದಾರೆ.

ಉದ್ಯಮಿಯ ವಿರುದ್ಧ ಜುಲೈ 5ರಂದು ಎಫ್ಐಆರ್ ದಾಖಲಿಸಲಾಗಿದೆ. ಆದ್ರೆ, ಇನ್ನು ಬಂಧನವಾಗಿಲ್ಲ. ಪ್ರಕರಣ ಗಂಭೀರವಾಗಿದ್ದು, ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ರೆ, ನೀರವ್ ಮೋದಿ ರೀತಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ ಎಂದು ಧನಂಜಯ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...