alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಹೀಗಿರಲಿದೆಯಾ ಮಲ್ಟಿಪ್ಲೆಕ್ಸ್ ನಲ್ಲಿನ ಸ್ಥಿತಿ?

ಮಲ್ಟಿಪ್ಲೆಕ್ಸ್ ಗಳಲ್ಲಿ ಹೊರಗಿನ ಆಹಾರ ಪದಾರ್ಥವನ್ನ ಕೊಂಡೊಯ್ಯಲು ನಿಷೇಧ ಹೇರುವಂತಿಲ್ಲ. ಹಾಗೇನಾದ್ರು ನಡೆದುಕೊಂಡರೆ ಅದು ಶಿಕ್ಷಾರ್ಹ ಅಪರಾಧ ಅಂತ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ ಆಗಸ್ಟ್ 1ರಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಜಾರಿಗೆ ಬರುವಂತೆ ಹೊರಗಿನ ಆಹಾರವನ್ನು ಕೊಂಡೊಯ್ಯೊದಕ್ಕೆ ಅನುಮತಿಯನ್ನ ನೀಡಿದೆ.

ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರ ಈಗ ನೆಟ್ಟಿಗರು ಮತ್ತು ಮೆಮ್ಸ್ ಪೇಜ್ ಗಳಿಗೆ ಭರ್ಜರಿ ಆಹಾರವಾಗಿಬಿಟ್ಟಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಪರಿಸ್ಥಿತಿ ಹೇಗೆ ಬದಲಾಗಬಹುದು ಅನ್ನೋ ವಿಚಾರವನ್ನಿಟ್ಟುಕೊಂಡು ಟ್ರೋಲ್ ಪೇಜ್ ಗಳು ಹಾಸ್ಯ ಚಟಾಕಿಯನ್ನ ಹಾರಿಸ್ತಿವೆ.

ಬಾಹುಬಲಿ ಶಿವಲಿಂಗವನ್ನು ಹೊತ್ತು ತರೋ ಹಾಗೆ ಕ್ಯಾರಿಯರ್ ಹೊತ್ತು ಬರುವ, ಮಲ್ಟಿಪ್ಲೆಕ್ಸ್ ಗಳ ಮುಂದೆ ಪಿಕ್ನಿಕ್ ಗೆ ಬಂದವರ ಹಾಗೆ ಊಟಕ್ಕೆ ಕೂತಿರುವ ಚಿತ್ರಗಳು ಸಿಕ್ಕಾಪಟ್ಟೆ ಶೇರ್ ಆಗ್ತಿವೆ. ಸಿನಿಮಾ ಹಾಲ್ ನಲ್ಲಿ ಯಾವ ಸ್ನ್ಯಾಕ್ಸ್ ತಿನ್ನಲಿ ಅನ್ನೋ ಕ್ವಶ್ಚನ್, ಸಲ್ಮಾನ್ ಖಾನ್ ಹಾಡಿನ ದೃಶ್ಯವೊಂದರ ತುಣುಕು ಸೇರಿದಂತೆ ಹಲವು ರೀತಿಯ ಟ್ರೋಲ್ ಗಳು ನೆಟ್ಟಿಗರಿಂದ ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...