alex Certify
ಕನ್ನಡ ದುನಿಯಾ       Mobile App
       

Kannada Duniya

‘ಮಹಾ’ ಸಿಎಂ ‘ಧರ್ಮ’ ಸಂಕಟಕ್ಕೆ ಕಾರಣವಾಯ್ತು ಸ್ವಾಮೀಜಿ ನೀಡಿದ ಚೈನ್

50909663

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಪತ್ನಿಯ ಕಾರಣಕ್ಕಾಗಿ ‘ಧರ್ಮ’ ಸಂಕಟಕ್ಕೆ ಸಿಲುಕುವಂತಾಗಿದೆ. ಸ್ವಾಮೀಜಿಯೊಬ್ಬರು ಗಾಳಿಯಲ್ಲಿ ಕೈಯ್ಯಾಡಿಸಿ ಫಡ್ನವೀಸ್ ಪತ್ನಿ ಅಮೃತಾರವರಿಗೆ ಚಿನ್ನದ ಚೈನ್ ನೀಡಿದ್ದು, ಅದೀಗ ವಿವಾದಕ್ಕೆ ಕಾರಣವಾಗಿದೆ.

ಪುಣೆ ಮೂಲದ ಶಿಕ್ಷಣ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಪಾಲ್ಗೊಂಡಿದ್ದರು. ಇದೇ ಸಮಾರಂಭದಲ್ಲಿ ಉಪಸ್ಥಿತರಿದ್ದ ಗುರುವಾನಂದ ಸ್ವಾಮಿ ತಮ್ಮ ಅಶೀರ್ವಾದ ಪಡೆಯಲು ಬಂದ ಅಮೃತಾ ಅವರಿಗೆ ಗಾಳಿಯಲ್ಲಿ ಕೈಯ್ಯಾಡಿಸಿ ಚಿನ್ನದ ಚೈನ್ ಅನ್ನು ಆಶೀರ್ವಾದದ ರೂಪದಲ್ಲಿ ನೀಡಿದ್ದರು.

ಇದು ಮಹಾರಾಷ್ಟ್ರದ ವಿಚಾರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಮುಖ್ಯಮಂತ್ರಿ ಫಡ್ನವೀಸ್ ಈ ಕುರಿತು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ ಸ್ವಾಮೀಜಿ ಈ ಪವಾಡವನ್ನು ತಮ್ಮೆದುರೇ ಮಾಡಿದರೆ ಅವರಿಗೆ 21 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ತಮಗೆ ಸ್ವಾಮೀಜಿ ಚಿನ್ನದ ಚೈನ್ ನೀಡಿದ ಕುರಿತು ಪ್ರತಿಕ್ರಿಯೆ ನೀಡಿರುವ ಫಡ್ನವೀಸ್ ಅವರ ಪತ್ನಿ ಅಮೃತಾ, ತಾವು ಪವಾಡಗಳನ್ನು ನಂಬುವುದಿಲ್ಲ. ಹಿರಿಯರಾದ ಗುರುವಾನಂದ ಸ್ವಾಮಿಗಳ ಆಶೀರ್ವಾದ ಪಡೆಯುವ ವೇಳೆ ಅದನ್ನು ನೀಡಿದ್ದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...