alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ರಸಾಗಳ ಕುರಿತು ಶಾಕಿಂಗ್ ಮಾಹಿತಿ ನೀಡಿದ ಶಿಯಾ ಮುಖ್ಯಸ್ಥ

ನವದೆಹಲಿ: ಮದ್ರಸಾಗಳಲ್ಲಿ ವೈದ್ಯರು, ಇಂಜಿನಿಯರ್ ಗಳನ್ನು ರೂಪಿಸುತ್ತಿಲ್ಲ. ಬದಲಾಗಿ ಭಯೋತ್ಪಾದಕರನ್ನು ತಯಾರಿಸಲಾಗ್ತಿದೆ ಎಂದು ಶಿಯಾ ಬೋರ್ಡ್ ಮುಖ್ಯಸ್ಥರು ಆರೋಪಿಸಿದ್ದಾರೆ.

ಈ ಕುರಿತಂತೆ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡಲು ಹಲವು ಮದ್ರಸಾಗಳು ಬಳಕೆಯಾಗ್ತಿವೆ ಎಂದು ಶಿಯಾ ಬೋರ್ಡ್ ಮುಖ್ಯಸ್ಥ ವಸೀಮ್ ರಿಜ್ವಿ ತಿಳಿಸಿದ್ದಾರೆ.

ಮದ್ರಸಾಗಳ ಸ್ವರೂಪವನ್ನು ಬದಲಿಸಬೇಕಿದೆ. ಮುಖ್ಯವಾಹಿನಿಯ ಶಿಕ್ಷಣಕ್ಕೆ ಅವುಗಳನ್ನು ಸಜ್ಜುಗೊಳಿಸಬೇಕಿದೆ. ಎಷ್ಟು ಮದ್ರಸಾಗಳಲ್ಲಿ ವೈದ್ಯರು, ಇಂಜಿನಿಯರ್ ಗಳು ತಯಾರಾಗಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಅನೇಕ ಮದ್ರಸಾಗಳು ಭಯೋತ್ಪಾದಕ ಚಟುವಟಿಕೆಗಳಿಗೆ ಸಹಕಾರ ನೀಡಿವೆ ಎಂದು ದೂರಿದ್ದಾರೆ.

ಔಪಚಾರಿಕ ಶಿಕ್ಷಣ ಸಂಸ್ಥೆಗಳ ರೀತಿಯಲ್ಲಿ ಮದ್ರಸಾಗಳನ್ನು ಬದಲಿಸಿ, ಸಿ.ಬಿ.ಎಸ್.ಸಿ., ಐ.ಸಿ.ಎಸ್.ಸಿ.ಗೆ ಸಂಯೋಜನೆ ಮಾಡಬೇಕು. ಮುಸ್ಲಿಮೇತರ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಿ, ಧಾರ್ಮಿಕ ಶಿಕ್ಷಣವನ್ನು ಐಚ್ಛಿಕ ವಿಷಯವಾಗಿ ಕಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಆಲ್ ಇಂಡಿಯಾ ಮಜ್ಲಿಸ್ ಇ ಇತೇಹಾದ್ ಉಲ್ ಮುಸ್ಲೀಮಿನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬಫೂನ್ ಮತ್ತು ಅವಕಾಶವಾದಿಯಾಗಿದ್ದಾರೆ ಎಂದು ರಿಜ್ವಿ ಟೀಕಿಸಿದ್ದಾರೆ.

ಅವರ ಹೇಳಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಓವೈಸಿ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ವಸೀಮ್ ರಿಜ್ವಿ ದೊಡ್ಡ ಜೋಕರ್ ಮತ್ತು ಅವಕಾಶವಾದಿ ವ್ಯಕ್ತಿಯಾಗಿದ್ದಾರೆ. ಅವರು ಆರ್.ಎಸ್.ಎಸ್.ಗೆ ಮಾರಾಟವಾಗಿದ್ದಾರೆ ಎಂದು ಟೀಕಿಸಿದ್ದು, ಮದ್ರಸಾಗಳ ಕುರಿತಾಗಿ ಅವರು ಮಾಡಿರುವ ಆರೋಪಗಳ ಬಗ್ಗೆ ಪುರಾವೆ ಇದ್ದರೆ ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...