alex Certify
ಕನ್ನಡ ದುನಿಯಾ       Mobile App
       

Kannada Duniya

ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಜಿ.ಪಂ. ಮಾಜಿ ಅಧ್ಯಕ್ಷೆ

ಭೋಪಾಲ್: ಅದೃಷ್ಟ ಕೈ ಹಿಡಿದರೆ ತಿರುಕನೂ ಕೂಡ ಶ್ರೀಮಂತನಾಗುತ್ತಾನೆ, ಅದೇ ಅದೃಷ್ಟ ಕೈ ಕೊಟ್ಟರೆ ಶ್ರೀಮಂತ, ಸುಖದ ಸುಪ್ಪತ್ತಿಗೆಯಲ್ಲಿ ಮೆರೆದವರೂ ಕೂಡ ತಿರುಕನ ಜೀವನ ಸಾಗಿಸಬೇಕಾಗುತ್ತೆ; ಬದುಕು ಬವಣೆಯಾಗುತ್ತೆ…. ಇಲ್ಲೊಬ್ಬ ಮಹಿಳೆ ಜೀವನ ಇದಕ್ಕಿಂತ ಭಿನ್ನವಾಗಿಲ್ಲ.

ಒಂದು ಕಾಲದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ, ಬಳಿಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಕೆಂಪು ಗೂಟದ ಕಾರಿನಲ್ಲಿಯೇ ಓಡಾಡುತ್ತಿದ್ದ ಮಹಿಳೆಯೊಬ್ಬರ ಸ್ಥಿತಿ ಇಂದು ಕುರಿಗಳನ್ನು ಕಾಯುತ್ತಾ ಬದುಕು ಸಾಗಿಸಬೇಕಾದ ಪರಿಸ್ಥಿತಿಗೆ ಬಂದಿದೆ.

ಹೌದು. ಮಧ್ಯಪ್ರದೇಶದ ರಾಂಪುರಿಯ ಲುಹಾರ್​ಪುರ ಗಲ್ಲಿಯಲ್ಲಿ ಇಂದು ಕುರಿಗಳನ್ನು ಕಾಯುತ್ತಿರುವ ಈ ಆದಿವಾಸಿ ಮಹಿಳೆ ಜೂಲಿ ಒಂದು ಕಾಲದಲ್ಲಿ ಮಂತ್ರಿಗಳ ರೀತಿಯಲ್ಲಿ ಬಾಳಿದವರು. ಸರ್ಕಾರದಿಂದ ಜೂಲಿ ರಾಜ್ಯಮಂತ್ರಿಯ ಸ್ಥಾನಮಾನ ಪಡೆದುಕೊಂಡಿದ್ದರು. ಮಾಜಿ ಶಾಸಕ ಹಾಗೂ ಜಿಲ್ಲೆಯ ಬಹುದೊಡ್ಡ ನಾಯಕ ರಾಮ್​ಸಿಂಗ್​ ಯಾದವ್, ಜೂಲಿಯವರನ್ನು 2005 ರಲ್ಲಿ ಜಿಲ್ಲಾ ಪಂಚಾಯತ್​ ಸದಸ್ಯರನ್ನಾಗಿ ಮಾಡಿದ್ದರು. ಅದಾದ ಬಳಿಕ ಮತ್ತೊಬ್ಬ ಮಾಜಿ ಶಾಸಕ ವೀರೇಂದ್ರ ರಘುವಂಶಿ ಜಿಲ್ಲಾ ಪಂಚಾಯತ್​ ಅಧ್ಯಕ್ಷ ಸ್ಥಾನಕ್ಕೇರಿಸಿದ್ದರು. ಆದಿವಾಸಿ ಮಹಿಳೆಯೊಬ್ಬರು ಈ ಸ್ಥಾನಕ್ಕೇರಿದ್ದರಿಂದ ಜೂಲಿಯವರಿಗೆ ಸಾಕಷ್ಟು ಸೌಲಭ್ಯ, ಮನ್ನಣೆ ದೊರೆತವು. ಆದರೆ ಅದೆಲ್ಲವೂ ಕ್ಷಣಿಕವಾಗಿತ್ತು.

ಅಧಿಕಾರದಿಂದ ಕೆಂಪು ಗೂಟದ ಕಾರಿನಲ್ಲಿ ಓಡಾಡಿದ್ದ ಮಹಿಳೆ ಕಾಲಕಳೆದಂತೆ ಇಂದು ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ವಾಸಕ್ಕೂ ಮನೆಯಿಲ್ಲ, ಊಟಕ್ಕೂ ಗಂಜಿಯಿಲ್ಲ. ಹಳ್ಳಿಯ 50ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸುವ ಕೆಲಸ ಮಾಡುತ್ತ, ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಕೂಲಿ ಕೆಲಸಕ್ಕಾಗಿ ಒಮ್ಮೊಮ್ಮೆ ಜೂಲಿ ಗುಜರಾತ್ ವರೆಗೂ ಹೋಗಿ ಬರಬೇಕಾದ ಸ್ಥಿತಿಯಲ್ಲಿದ್ದಾರೆ. ವಾಸಿಸಲು ಇಂದಿರಾ ಕುಟೀರ ನೀಡುವಂತೆ ಅರ್ಜಿ ಸಲ್ಲಿಸಿದರೂ, ಮನೆ ಮಂಜೂರಾಗುತ್ತಿಲ್ಲ. ಹಾಗಾಗಿ ಟೆಂಟ್ ನಲ್ಲಿ ಕಾಲಕಳೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...