alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರನ್ನು ಪತ್ತೆ ಮಾಡಲು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ರು

ಮಧ್ಯಪ್ರದೇಶದ ಜೋಬತ್ ಗ್ರಾಮದಲ್ಲಿರೋ ಸರ್ಕಾರಿ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರೋ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. 10ನೇ ತರಗತಿಯ ಆ ಬಾಲಕಿಯರು ತನ್ನ ಬಳಿಯಿದ್ದ 1000 ರೂಪಾಯಿ ಕಳವು ಮಾಡಿದ್ದಾರೆಂದು ಸಹಪಾಠಿ ಆರೋಪ ಮಾಡಿದ್ದಳು.

ಕಳ್ಳರನ್ನು ಪತ್ತೆ ಮಾಡುವ ಭರದಲ್ಲಿ ಶಿಕ್ಷಕಿಯರು ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾರೆ. ಆದ್ರೆ ಬಾಲಕಿಯರು ಹಣ ಕದ್ದಿರಲಿಲ್ಲ. ಅವರ ಬಳಿ ಹಣ ಪತ್ತೆಯಾಗಿಲ್ಲ. ಜನವರಿ 8ರಂದು ಈ ಘಟನೆ ನಡೆದಿದ್ದು, ಬಾಲಕಿಯರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಹಣ ಕದ್ದಿದ್ದೀರಾ ಅಂತಾ ಮೊದಲು ತರಗತಿಯಲ್ಲೇ ಶಿಕ್ಷಕಿಯರು ವಿದ್ಯಾರ್ಥಿನಿಯರನ್ನು ಪ್ರಶ್ನೆ ಮಾಡಿದ್ದಾರೆ. ಅವರ ಸ್ಕೂಲ್ ಬ್ಯಾಗ್ ಶೋಧಿಸಿದ್ದಾರೆ. ನಂತರ ಶಾಲೆಯ ಇನ್ನೊಂದು ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ, ಹಣಕ್ಕಾಗಿ ಹುಡುಕಿದ್ದಾರೆ. ಆದ್ರೆ ಅಂಥ ಘಟನೆ ನಡೆದೇ ಇಲ್ಲ ಅಂತಾ ಶಾಲೆಯ ಮುಖ್ಯೋಪಾಧ್ಯಾಯರು ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...