alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ಕನ್ನ ಹಾಕಿದ್ದ ಕಳ್ಳ ಮಾಡಿದ್ದಾನೆ ಅಚ್ಚರಿಯ ಕೆಲಸ

robber

ಮಧ್ಯಪ್ರದೇಶದ ಭೋಪಾಲದಲ್ಲಿ ಕಳ್ಳತನ ಮಾಡಿ 5 ತಿಂಗಳ ನಂತರ ದರೋಡೆಕೋರನಿಗೆ ಜ್ಞಾನೋದಯವಾಗಿದೆ. ತಾನು ಕಳವು ಮಾಡಿದ್ದ ಮನೆಯ ಒಡತಿಗೆ ಪತ್ರ ಬರೆದಿರುವ ಕಳ್ಳ ಕ್ಷಮೆ ಕೇಳಿದ್ದಾನೆ. ಅಷ್ಟೇ ಅಲ್ಲ ಕದ್ದ ಮಾಲುಗಳನ್ನೆಲ್ಲ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದಾನೆ, ಜನವರಿ 29ರಂದು ಶಕೀರಾ ಖಾನ್ ಎಂಬಾಕೆಯ ಮನೆಯಲ್ಲಿ ಕಳ್ಳತನವಾಗಿತ್ತು.

ಇದೀಗ ಅಪರಿಚಿತ ಕಳ್ಳ ಬರೆದಿರುವ ಪತ್ರವನ್ನು ಶಕೀರಾ ಪೊಲೀಸರಿಗೆ ನೀಡಿದ್ದಾಳೆ. ತೀವ್ರ ಹಣಕಾಸಿನ ತೊಂದರೆ ಇದ್ದಿದ್ರಿಂದ ಅನಿವಾರ್ಯವಾಗಿ ಆಕೆಯ ಮನೆಯಲ್ಲಿ ಕಳ್ಳತನ ಮಾಡಬೇಕಾಯ್ತು ಅಂತಾ ಕಳ್ಳ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಕದ್ದಿರುವ ಆಭರಣ ಸೇರಿದಂತೆ ಎಲ್ಲವನ್ನೂ ವಾಪಸ್ ತಂದುಕೊಡೋದಾಗಿ ಹೇಳಿದ್ದಾನೆ.

ಅಷ್ಟೇ ಅಲ್ಲ ತಾನು ಕದ್ದಿದ್ದ ಆಭರಣಗಳಲ್ಲಿ ಎರಡು ಉಂಗುರಗಳ ಫೋಟೋವನ್ನು ಕೂಡ ಕಳಿಸಿದ್ದಾನೆ. ಪಕ್ಕದ ಮನೆಯಾತನೇ ಕಳವು ಮಾಡಿರಬಹುದೆಂದು ಶಕೀರಾ ಶಂಕಿಸಿದ್ದಾಳೆ. ಆದ್ರೆ ಆತ ಅಪ್ರಾಪ್ತನಾಗಿರುವುದರಿಂದ ಪೊಲೀಸರು ಸಾಕ್ಷ್ಯವಿಲ್ಲದೆ ಆತನನ್ನು ಬಂಧಿಸಲು ನಿರಾಕರಿಸಿದ್ದಾರೆ. ಕಳ್ಳ ತಪ್ಪೊಪ್ಪಿಕೊಂಡು ಪತ್ರ ಬರೆದಿರುವುದು ಇದೇ ಮೊದಲು ಅಂತಾ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...