alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್…! ನೀರಿನ ಮಧ್ಯೆ ಸಿಲುಕಿದವರು ಕ್ಷಣಾರ್ಧದಲ್ಲಿ ಕಣ್ಮರೆ

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸುಲ್ತಾನ್ಪುರ ಮತ್ತು ಗ್ವಾಲಿಯರ್ ನಡುವೆ ಇರುವಂತಾ ಸುಲ್ತಾನ್ ಗರ್ ಜಲಪಾತದ ನಡುವೆ ಅನಿರೀಕ್ಷಿತವಾಗಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಜನರು ಜಲಪಾತದ ನಡುವೆ ಸಿಲುಕಿ ತೊಂದರೆ ಅನುಭವಿಸುವಂತಾಗಿದೆ. ಜಲಪಾತವನ್ನು ನೋಡುವ ಸಲುವಾಗಿ ಪಿಕ್ನಿಕ್ ಗೆ ಬಂದಿದ್ದವರು ಪ್ರಾಣಾಪಾಯದಲ್ಲಿ ಸಿಲುಕಿದ್ದ ಘಟನೆ ನಡೆದಿದೆ.

ಸುಮಾರು 40 ಮಂದಿ ಜಲಪಾತದ ನಡುವೆ ಸಿಲುಕಿದ್ದರು. ಸಂಜೆ ನಾಲ್ಕು ಗಂಟೆಗೆ ದಿಢೀರನೆ ಜಲಪಾತದಲ್ಲಿ ನೀರಿನ ಮಟ್ಟ ಹೆಚ್ಚಾಯ್ತು. ಈ ವಿಚಾರ ತಿಳಿಯದೆ ಜಲಪಾತದ ನಡುವೆ ಸಿಲುಕಿದ್ದವರು ಆತಂಕಕ್ಕೊಳಗಾದರು. ಆನಂತರದಲ್ಲಿ ರಾತ್ರಿ 2 ಗಂಟೆಯಿಂದ 5 ಗಂಟೆವರೆಗೆ ಸೇನೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಕೆಲವರನ್ನು ಹೆಲಿಕ್ಯಾಪ್ಟರ್ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ.

ಆದ್ರೆ ದಿಢೀರನೆ ಹೆಚ್ಚಾದ ನೀರಿನ ಮಟ್ಟದಿಂದ 12 ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಸ್ಥಳದಲ್ಲಿ ಇದ್ದಂತಾ ಕೆಲವರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಘಟನೆಯ ಭೀಕರತೆಯನ್ನು ತೋರಿಸುವ ಈ ವಿಡಿಯೋದಲ್ಲಿ ಹೇಗೆ ಕ್ಷಣಾರ್ಧದಲ್ಲಿ ಪ್ರವಾಸಿಗರ ಖುಷಿ, ದುಃಖವಾಗಿ ಬದಲಾಯ್ತು ಅನ್ನೋದನ್ನ ಸೂಚಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...