alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಕ್ಕಳ ಮೇಲೆ ಸಚಿವರ ದೌರ್ಜನ್ಯ

kids

ಮಧ್ಯಪ್ರದೇಶದ ಸಚಿವರೊಬ್ಬರು ಮಕ್ಕಳಿಗೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಈ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಓಂ ಪ್ರಕಾಶ್ ಧ್ರುವೆ, ಸರ್ಕಾರಕ್ಕೆ ಮುಜುಗರ ತಂದಿದ್ದಾರೆ. ಇತ್ತೀಚೆಗಷ್ಟೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರನ್ನು ಸಾರ್ವಜನಿಕರ ಎದುರೇ ನಿಂದಿಸುವ ಮೂಲಕ ಓಂ ಪ್ರಕಾಶ್ ಧ್ರುವೆ ವಿವಾದ ಹುಟ್ಟುಹಾಕಿದ್ದರು.

ದಿಂಡೋರಿಯಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಸಚಿವರು ಪಾಲ್ಗೊಂಡಿದ್ದರು. ಮದುವೆ ಮನೆಯಲ್ಲಿ ನರ್ತಿಸುತ್ತ, ಹಣವನ್ನು ಎಸೆದಿದ್ದಾರೆ. ಆಗ ಕೆಲವು ಮಕ್ಕಳು ಆ ನೋಟುಗಳನ್ನು ಆಯ್ದುಕೊಳ್ಳಲು ಬಂದಿದ್ರು. ಈ ವೇಳೆ ಮಕ್ಕಳನ್ನು ಬೆನ್ನಟ್ಟಿಕೊಂಡು ಹೋಗಿ ಸಚಿವರು ಮನಬಂದಂತೆ ಥಳಿಸಿದ್ದಾರೆ.

ಸಚಿವರ ನಿಷ್ಕರುಣಕೃತ್ಯದ ಬಗ್ಗೆ ಅಪಾರ ಟೀಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಈ ಘಟನೆಯಲ್ಲಿ ಕೆಲ ಮಕ್ಕಳು ಗಾಯಗೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...