alex Certify
ಕನ್ನಡ ದುನಿಯಾ       Mobile App
       

Kannada Duniya

ಫೋನ್ ರಿಸೀವ್ ಮಾಡದ ಪ್ರಿಯತಮೆ ಕತ್ತು ಹಿಸುಕಿದ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿದೆ. ಫೋನ್ ನಲ್ಲಿ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಪ್ರೇಮಿಯೊಬ್ಬ ಪ್ರಿಯತಮೆಯ ಹತ್ಯೆ ಮಾಡಿದ್ದಾನೆ. 22 ವರ್ಷದ ಯುವಕ, 16 ವರ್ಷದ ಹುಡುಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಜಬಲ್ಪುರದ ತಿಲಗಾಂವ್ ನಲ್ಲಿ ಘಟನೆ ನಡೆದಿದೆ. ಅಮಿತ್ ವರ್ಮನ್ ಎಂಬಾತ 16 ವರ್ಷದ ಪ್ರಿಯತಮೆಯನ್ನು ಹತ್ಯೆಗೈದಿದ್ದಾನೆ. ಇಬ್ಬರ ಪ್ರೇಮ ಪ್ರಸಂಗ ಮನೆಯವರಿಗೆ ಗೊತ್ತಾಗಿತ್ತು. ಹಾಗಾಗಿ ಹುಡುಗಿಗೆ ಮೊಬೈಲ್ ನಲ್ಲಿ ಮಾತನಾಡಲು ಅವಕಾಶ ನೀಡಿರಲಿಲ್ಲ.

ಬುಧವಾರ ಹುಡುಗಿ ಮನೆಗೆ ಬಂದ ಯುವಕ, ಮನೆಯಲ್ಲಿದ್ದವರಿಗೆ ಹೆದರಿಸಿದ್ದಾನೆ. ಅವ್ರ ಮೇಲೆ ದಾಳಿ ಮಾಡಿದ್ದಾನೆ. ನಂತ್ರ ಹುಡುಗಿಗೆ ಚಾಕುವಿನಿಂದ ಇರಿದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಹುಡುಗಿ ಸಹೋದರಿಗೂ ಗಾಯಗಳಾಗಿವೆ. ಸುದ್ದಿ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...