alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾ ಖರ್ಚಿನಲ್ಲೇ ಮುಗಿಯಿತು ಮದುವೆ..!

indian-wedding-destination-neemrana

ನೋಟು ನಿಷೇಧದ ಬಳಿಕ ಎಲ್ಲರೂ ಸರಳ ವಿವಾಹಕ್ಕೆ ಆದ್ಯತೆ ಕೊಡ್ತಿದ್ದಾರೆ. ವೈಭೋಗದ ಮದುವೆ, ಭೂರಿ ಭೋಜನ ಇವೆಲ್ಲ ಕೊಂಚ ಕಡಿಮೆಯಾಗಿದೆ. ಮಧ್ಯಪ್ರದೇಶದಲ್ಲಿ ಅತಿಥಿಗಳಿಗೆ ಚಹಾ ವಿತರಿಸುವ ಮೂಲಕ ಸಿಂಪಲ್ ಆಗಿ ಮದುವೆ ಕಾರ್ಯಕ್ರಮವನ್ನು ಮುಗಿಸಲಾಗಿದೆ.

ರತ್ಲಮ್ ಜಿಲ್ಲೆಯ ಕಪಿಲ್ ರಾಥೋಡ್ ಹಾಗೂ ಅಂತಿಂಬಲಾ ಎಂಬುವವರ ಮದುವೆ 3 ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಧೂಂ ಧಾಂ ಆಗಿಯೇ ಮದುವೆಯಾಗಬೇಕೆಂದು ಅವರೂ ಅಂದುಕೊಂಡಿದ್ರು. ಆದ್ರೆ ನೋಟು ನಿಷೇಧದ ನಂತರ ವಿವಾಹದ ಖರ್ಚಿಗೆ ಬೇಕಾದ ಹಣ ಹೊಂದಿಸಲು ಸಾಧ್ಯವಾಗಲಿಲ್ಲ.

ಹಾಗಾಗಿ ಸ್ಥಳೀಯ ಕೋರ್ಟ್ ನಲ್ಲಿ ರಿಜಿಸ್ಟರ್ ಮಾಡಿಸಿದ ಈ ಜೋಡಿ, ರಾಮ ದೇವಾಲಯದಲ್ಲಿ ಸರಳವಾಗಿ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ಬಂದಿದ್ದ ಅತಿಥಿಗಳಿಗೆಲ್ಲ ಒಂದೊಂದು ಕಪ್ ಚಹಾ ನೀಡಿ ಸತ್ಕರಿಸಿದ್ದಾರೆ. ಹೆಚ್ಚು ಅಂದ್ರೆ ಈ ಮದುವೆಗೆ 1000 ರೂಪಾಯಿ ಖರ್ಚಾಗಿರಬಹುದು. ಸಿಂಪಲ್ ಮದ್ವೆಯಾಗಿದ್ರೂ 800 ಮಂದಿ ದಂಪತಿಯನ್ನು ಆಶೀರ್ವದಿಸಲು ಬಂದಿದ್ದು ವಿಶೇಷ. ಅದ್ಧೂರಿ ವಿವಾಹದ ಬದಲು ಸರಳವಾಗಿ ಮದುವೆಯಾಗೋದು ಎಷ್ಟು ಅರ್ಥಪೂರ್ಣ ಅನ್ನೋದು ಈಗ ತಿಳೀತು ಅಂತಾ ವರ ಕಪಿಲ್ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...