alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವೀಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳ್ತಿದ್ದಾರೆ ಪೊಲೀಸ್

shobhaa-de-mp-copಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಮುಂಬೈ ಪೊಲೀಸರನ್ನು ಗೇಲಿ ಮಾಡಲು ಮಧ್ಯ ಪ್ರದೇಶದ ಇನ್ಸ್ ಪೆಕ್ಟರ್ ಒಬ್ಬರ ಚಿತ್ರವನ್ನು ಬಳಸಿಕೊಂಡಿದ್ದ ಬರಹಗಾರ್ತಿ ಶೋಭಾ ಡೇ ಈ ಮೂಲಕ ಆ ವ್ಯಕ್ತಿಗೆ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ.

ಅನಾರೋಗ್ಯ ಸಮಸ್ಯೆಯಿಂದಾಗಿ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗಾವತ್ ಗೆ ಸೈಫಿ ಆಸ್ಪತ್ರೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಿದ್ದು, ಸೋಮವಾರದಂದು ದೌಲತ್ ರಾಮ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆಸ್ಪತ್ರೆಗೆ ದಾಖಲಾಗುವಾಗ 180 ಕೆ.ಜಿ. ಇದ್ದ ದೌಲತ್ ರಾಮ್ ಪ್ರಾಥಮಿಕ ಚಿಕಿತ್ಸೆ ಬಳಿಕ 5.5 ಕೆ.ಜಿ. ತೂಕ ಕಡಿಮೆಯಾಗಿದ್ದರು. ಇದೀಗ ಅವರಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದ್ದು, ಮುಂದಿನ 18 ತಿಂಗಳುಗಳಲ್ಲಿ 100 ಕೆ.ಜಿ. ಯಷ್ಟು ತೂಕ ಇಳಿಕೆಯಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಕೆಲ ದಿನಗಳ ವಿಶ್ರಾಂತಿ ಬಳಿಕ ಎಂದಿನಂತೆ ದೌಲತ್ ರಾಮ್ ಕರ್ತವ್ಯಕ್ಕೆ ಹಾಜರಾಗಬಹುದೆಂದು ಹೇಳಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೌಲತ್ ರಾಮ್, ಶೋಭಾ ಡೇ, ಪೊಲೀಸರನ್ನು ಗೇಲಿ ಮಾಡಲು ತಮ್ಮ ಚಿತ್ರ ಬಳಸಿಕೊಂಡಿದ್ದಕ್ಕೆ ಯಾವ ಬೇಸರವೂ ಇಲ್ಲ. ಇದರಿಂದ ತಮಗೆ ಒಳ್ಳೆಯದೇ ಆಗಿದ್ದು, ಇದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...