alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಗ್ ಮೇಲೆ ಜಾತಿ ಬರೆದು ವಿವಾದ ಹುಟ್ಟು ಹಾಕಿದ ಕಾಲೇಜು..!

mp-bag

ಮಧ್ಯಪ್ರದೇಶದ ಸರ್ಕಾರಿ ಕಾಲೇಜೊಂದು ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಿದೆ. ಬ್ಯಾಗ್ ಗಳ ಮೇಲೆ ಎಸ್ ಸಿ/ ಎಸ್ ಟಿ ಎಂದು ಬರೆದಿರೋದು ವಿವಾದಕ್ಕೆ ನಾಂದಿ ಹಾಡಿದೆ.

ಮಂಡ್ಸೌರ್ ನ ರಾಜೀವ್ ಗಾಂಧಿ ಸರ್ಕಾರಿ ಪಿಜಿ ಕಾಲೇಜಿನಲ್ಲಿರುವ 600 ವಿದ್ಯಾರ್ಥಿಗಳ ಪೈಕಿ ಸುಮಾರು 250 ಮಂದಿ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರು. ಅವರಿಗೆ ಕ್ಯಾಲ್ಕ್ಯುಲೇಟರ್, ಪೆನ್ ಮತ್ತು ನೋಟ್ ಬುಕ್ ಇರುವ ಬ್ಯಾಗ್ ಗಳನ್ನು ವಿತರಿಸಲಾಗಿದೆ.

ಕ್ಷೇಮಾಭಿವೃದ್ಧಿ ಯೋಜನೆಯಡಿ ಈ ಬ್ಯಾಗ್ ಗಳನ್ನು ವಿತರಿಸಲಾಗಿದೆಯಂತೆ, ಹಾಗಾಗಿ ಬ್ಯಾಗ್ ಗಳ ಮೇಲೆ ಎಸ್ ಸಿ/ ಎಸ್ ಟಿ ಎಂದು ಬರೆಯಲಾಗಿದೆ. ಯಾರಿಗಾದ್ರೂ ಅದು ಇಷ್ಟವಿಲ್ಲ ಎಂದಾದಲ್ಲಿ ಅಳಿಸಿ ಹಾಕಬಹುದು ಎನ್ನುತ್ತಾರೆ ಪ್ರಾಂಶುಪಾಲ ಬಿ.ಆರ್. ನಲ್ವಯಾ.

ಆಗಸ್ಟ್ ನಿಂದ ಬ್ಯಾಗ್ ಗಳನ್ನು ವಿತರಿಸಲಾಗ್ತಿದೆ. ಇನ್ನು ಮುಂದೆ ಬ್ಯಾಗ್ ಗಳ ಮೇಲೆ ಬರೆದಿರುವ ಅಕ್ಷರಗಳನ್ನೆಲ್ಲ ಅಳಿಸಿಹಾಕಿಯೇ ಕೊಡುವುದಾಗಿ ಪ್ರಿನ್ಸಿಪಾಲರು ಭರವಸೆ ನೀಡಿದ್ದಾರೆ. ಈ ಬ್ಯಾಗ್ ಗಳ ಫೋಟೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಆರ್ ಎಸ್ ಎಸ್ ವಿಚಾರಧಾರೆಯುಳ್ಳ ಮಧ್ಯಪ್ರದೇಶ ಸರ್ಕಾರ, ದಲಿತ ವಿರೋಧಿ ಮತ್ತು ಬುಡಕಟ್ಟು ಜನಾಂಗ ವಿರೋಧಿ ನೀತಿಗೆ ಇದೇ ಸಾಕ್ಷಿ ಅಂತಾ ಕಾಂಗ್ರೆಸ್ ಮುಖಂಡರು ಟೀಕಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...