alex Certify
ಕನ್ನಡ ದುನಿಯಾ       Mobile App
       

Kannada Duniya

ವೇದಿಕೆ ಮೇಲೆ ಪತ್ನಿ ಜೊತೆ ಹೆಜ್ಜೆ ಹಾಕಿದ ಸಿಎಂ

modi-20

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಬ್ಬವೊಂದರಲ್ಲಿ ತಮ್ಮ ಪತ್ನಿ ಸಾಧನಾ ಸಿಂಗ್ ಜೊತೆ ಹೆಜ್ಜೆ ಹಾಕಿದ್ದಾರೆ. ಭೋಪಾಲ್ ನ ಕೋಲಾರದಲ್ಲಿ ಶ್ರೀರಾಮ್ ಭಾಗವತ್ ಕಥಾ ಕಾರ್ಯಕ್ರಮ ಒಂದು ವಾರಗಳ ಕಾಲ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಪತ್ನಿ ಜೊತೆ ಭಾಗವತ ಕಥೆ ಕೇಳಿದ್ರು.

ಗುರುವಾರ ಶ್ರಮದ್ ಭಾಗವತ ಕಥೆಯಲ್ಲಿ ಶ್ರೀಕೃಷ್ಣ ಹಾಗೂ ರುಕ್ಮಿಣಿ ಮದುವೆ ವಿಶೇಷವಾಗಿತ್ತು. ಈ ವೇಳೆ ಸಿಎಂ ಪತ್ನಿ ಜೊತೆ ವಿವಾಹದ ಎಲ್ಲ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ರು. ನಂತ್ರ ಪತ್ನಿ ಜೊತೆ ವೇದಿಕೆ ಮೇಲೆ ಡಾನ್ಸ್ ಮಾಡಿ ನೆರೆದವರಿಗೆ ಮನರಂಜನೆ ನೀಡಿದ್ರು.

ಈ ವೇಳೆ ಸಿಎಂ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ನರ್ಮದಾ ಸೇವಾ ಯಾತ್ರೆ ಬಗ್ಗೆ ಮಾತನಾಡಿದ ಅವರು, ನದಿಗಳ ರಕ್ಷಣೆಗೆ ಪರಿಸರ ರಕ್ಷಣೆ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದ್ರು. ರಾಜ್ಯದ ಜನರ ಸಂತೋಷಕ್ಕೆ ಸರ್ಕಾರ ಬದ್ಧವಾಗಿದೆ ಎಂದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...