alex Certify
ಕನ್ನಡ ದುನಿಯಾ       Mobile App
       

Kannada Duniya

ನಿರಾಶ್ರಿತರ ಸಂಕಷ್ಟಕ್ಕೆ ಸ್ಪಂದಿಸಿದ ಹೊದಿಕೆ ಮಾರಾಟಗಾರ

ಈ ಬಾರಿ ಭಾರತದ ಹಲವೆಡೆ ಭಾರೀ ಮಳೆಯಿಂದ ಜನ ಹೈರಾಣಾಗಿದ್ದಾರೆ. ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೇರಳದಲ್ಲಿ ವರುಣನ ಆರ್ಭಟಕ್ಕೆ ಸುಮಾರು 37 ಜನ ಸಾವನ್ನಪ್ಪಿದ್ದು, 50 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.

ದೇವರ ನಾಡಿನಲ್ಲಿ ಸುರಿದ ದಾಖಲೆಯ ಪ್ರಮಾಣದ ಮಳೆ, ಜನರ ನಿದ್ದೆಗೆಡಿಸಿದೆ. ಆಣೆಕಟ್ಟೆಗಳು ತುಂಬಿವೆ. ನದಿಗಳು ಮೈದುಂಬಿ ಭೋರ್ಗರೆಯುತ್ತಿವೆ. ಹಲವು ಗ್ರಾಮಗಳು ಮುಳುಗಡೆ ಆಗಿದ್ದು, ಆತಂಕ ಸೃಷ್ಟಿಸಿದೆ. ಸ್ಥಳೀಯಾಡಳಿತ, ಸರ್ಕಾರ ಹಾಗೂ ಕೇಂದ್ರ ವಿಪತ್ತು ರಕ್ಷಣಾ ದಳ ಜನರನ್ನು ರಕ್ಷಿಸಲು ಹರಸಾಹಸ ಪಡುತ್ತಿವೆ. ನಿರಾಶ್ರಿತರಿಗೆ ಆಹಾರ ಹಾಗೂ ಬಟ್ಟೆಯನ್ನು ಸರಬರಾಜು ಮಾಡುವುದೇ ಸರ್ಕಾರಕ್ಕೆ ಚಿಂತೆಯಾಗಿದೆ. 

ಮಧ್ಯ ಪ್ರದೇಶ ಮೂಲದ ಹೊದಿಕೆ ಮಾರಾಟಗಾರೊಬ್ಬರ ಮನ ಸಹ ಕೇರಳ ಜನರ ಸ್ಥಿತಿ ಕಂಡು ಮರುಗಿದೆ. ತಾನು ತಯಾರಿಸಿದ್ದ ಹೊದಿಕೆಗಳನ್ನು ಕೇರಳದಲ್ಲಿ ಮಾರಾಟ ಮಾಡುವ ಪ್ಲಾನ್ ನೊಂದಿಗೆ ಬಂದಿದ್ದ ವ್ಯಾಪಾರಿ, ಇಲ್ಲಿನ ವಸ್ತು ಸ್ಥಿತಿ ಕಂಡು ನಿರಾಶ್ರಿತರ ಬಳಕೆಗೆ ಅವುಗಳನ್ನು ಉಚಿತವಾಗಿ ನೀಡಿದ್ದಾರೆ.

ಕೇರಳ ನನ್ನ ಎರಡನೇ ತವರು. ಈ ರಾಜ್ಯ ನನಗೆ ಬೇಕಾಗಿದ್ದನ್ನೆಲ್ಲಾ ನೀಡಿದೆ. ಈಗ ರಾಜ್ಯ ಸಂಕಷ್ಟದಲ್ಲಿದೆ. ನಾನು ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದು ಹೊದಿಕೆ ಮಾರಾಟಗಾರ ವಿಷ್ಣು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...