alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತಿ ಹಿರಿಯ ವ್ಯಾಘ್ರ ಇನ್ನಿಲ್ಲ….

TIGER DEADವಿಶ್ವದಲ್ಲೇ ಅತ್ಯಂತ ಹೆಚ್ಚು ವರ್ಷ ಬದುಕಿದ್ದ ರಣತಂಬೋರ್ ನ ಹೆಣ್ಣು ಹುಲಿ ಮಚಲಿ ಸಾವನ್ನಪ್ಪಿದೆ. 20 ವರ್ಷ ವಯಸ್ಸಿನ ಈ ಹೆಣ್ಣು ಹುಲಿ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು.

ಮೂಲಗಳ ಪ್ರಕಾರ ಕಳೆದ 5 ದಿನಗಳಿಂದ ಮಚಲಿ ಆಹಾರವನ್ನೇ ಸೇವಿಸಿರಲಿಲ್ಲ. ರಣತಂಬೋರ್ ನ್ಯಾಶನಲ್ ಪಾರ್ಕ್ ನಲ್ಲಿದ್ದ ಅತ್ಯಂತ ಜನಪ್ರಿಯ ಹುಲಿ ಇದು. ಅತಿ ಹೆಚ್ಚು ಬಾರಿ ಭಾವಚಿತ್ರಗಳಲ್ಲಿ ಮಿಂಚಿದೆ. ಈ ಹುಲಿಯನ್ನ ‘ಲೇಡಿ ಆಫ್ ದಿ ಲೇಕ್’ ಅಂತಾ ಕರೆಯಲಾಗುತ್ತಿತ್ತು. ದೀರ್ಘಾಯುಷಿ ಹೆಣ್ಣು ಹುಲಿ ಮಚಲಿ ಸಾವಿಗೆ ಟ್ಟಿಟ್ಟರ್ ನಲ್ಲಿ ಭಾರೀ ಸಂತಾಪ ವ್ಯಕ್ತವಾಗಿದೆ.

ಪರಿಸರ ಪ್ರೇಮಿಗಳು, ಪ್ರಾಣಿಪ್ರಿಯರೆಲ್ಲ ಹೆಣ್ಣು ಹುಲಿಯ ಮರಣಕ್ಕೆ ಮರುಗಿದ್ದಾರೆ. ಮಚಲಿ ಇಲ್ಲದ ರಣತಂಬೋರ್ ರಾಷ್ಟ್ರೀಯ ಉದ್ಯಾನವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬ ಪೋಸ್ಟ್ ಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...