alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಟ್ ಗಾಗಿ ಪ್ರಾಂಶುಪಾಲರ ಕೊಠಡಿಯಲ್ಲಿ ದಾಂಧಲೆ ನಡೆಸಿದ ವಿದ್ಯಾರ್ಥಿ

ಪೂನಾದ ಕೈರುಲ್ ಇಸ್ಲಾಂ ಕಲೆ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ತನಗೆ ದಾಖಲಾತಿ ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಪ್ರಿನ್ಸಿಪಾಲ್ ಕ್ಯಾಬಿನ್ ಗೆ ನುಗ್ಗಿ, ದಾಂಧಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಆಯುಧದೊಂದಿಗೆ ಕಾಲೇಜು ಪ್ರವೇಶಿಸಿ ಪ್ರಾಂಶುಪಾಲರನ್ನೇ ಬೆದರಿಸಿದ ಪ್ರಕರಣ ಈಗ ಪೂನಾದಲ್ಲಿ ಆತಂಕ ಸೃಷ್ಟಿಸಿದೆ. ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರಾದ ಅನ್ವರ್ ಶೇಖ್ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫಾರೂಖ್ ಶೇಖ್ ಅಲಿಯಾಸ್ ಗುಡ್ಡು ಅಲಿಯಾಸ್ ಮುರ್ಗಾ ಎಂಬ ವಿದ್ಯಾರ್ಥಿಯಿಂದ ಈ ದಾಂಧಲೆ ನಡೆದಿದೆ. ಕಾಲೇಜಿನಲ್ಲಿ ಸೀಟ್ ಕೊಡಲೇಬೇಕು. ಕೊಡದೆ ಹೋದ್ರೆ ಮುಂದಾಗುವ ಪರಿಣಾಮ ದೊಡ್ಡದಾಗಿರುತ್ತೆ ಅಂತ ವಿದ್ಯಾರ್ಥಿ ಬೆದರಿಕೆ ಒಡ್ಡಿದ್ದಾನೆ. ಆನಂತರ ಟೇಬಲ್ ಮೇಲಿದ್ದ ಗ್ಲಾಸ್ ನ್ನ ಆಯುಧದಿಂದ ಚಚ್ಚಿ ಪುಡಿ ಮಾಡಿದ್ದಾನೆ. ವಿದ್ಯಾರ್ಥಿಯ ಹಿಂದೆ ಪೂನಾದ ಪ್ರಬಲ ರೌಡಿಗಳ ಕೈವಾಡ ಇರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಅಡ್ಮಿಷನ್ ಮಾಫಿಯಾದ ಇನ್ವಾಲ್ವೆಂಟ್ ಇದರಲ್ಲಿ ಇರಬಹುದು ಅಂತಾ ಪೊಲೀಸರು ಅನುಮಾನ ಪಟ್ಟಿದ್ದಾರೆ.

ಅನ್ವರ್ ಶೇಖ್ ಅವರು ಕಾಲೇಜಿನ ಪ್ರಾಂಶುಪಾಲರಾದ ನಂತರದಲ್ಲಿ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ದಾಖಲಾಗಿ ನೀಡುವ ಪ್ರಕ್ರಿಯೆ ಶುರುವಾಗಿದೆ. ಈ ಹಿಂದೆ ಇಂತಾ ಪರಿಪಾಠವಿಲ್ಲದೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಂಧಲೆ ಹೆಚ್ಚಾಗಿತ್ತು ಅಂತಿದ್ದಾರೆ ಕಾಲೇಜಿನ ಸಿಬ್ಬಂದಿ. ಈ ಘಟನೆಯಿಂದ ನಾನು ಹಿಂದೆ ಸರಿಯೋದಿಲ್ಲ. ಇಂತಾ ಪುಂಡಾಟಿಕೆಗಳಿಗೆಲ್ಲಾ ಕಾನೂನಿನ ಮೂಲಕವೇ ನಾನು ಹೋರಾಟ ನಡೆಸ್ತೀನಿ ಅಂತಿದ್ದಾರೆ ಕಾಲೇಜಿನ ಪ್ರಾಂಶುಪಾಲರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...