alex Certify
ಕನ್ನಡ ದುನಿಯಾ       Mobile App
       

Kannada Duniya

ಕರುಣಾನಿಧಿ ಆರೋಗ್ಯದಲ್ಲಿ ಏರುಪೇರು: ಮನೆಗೆ ದೌಡಾಯಿಸಿದ ನಾಯಕರು

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯದಲ್ಲಿ ಏರುಪೇರಾಗಿದೆ. ಕಾವೇರಿ ಆಸ್ಪತ್ರೆ ಮೂಲಗಳ ಪ್ರಕಾರ 94 ವರ್ಷದ ಕರುಣಾನಿಧಿ ಆರೋಗ್ಯದಲ್ಲಿ ಜುಲೈ 26 ರ ರಾತ್ರಿ ಏರುಪೇರಾಗಿದೆ. ಅವ್ರಿಗೆ ಚೆನ್ನೈನ ನಿವಾಸದಲ್ಲಿಯೇ ಚಿಕಿತ್ಸೆ ನೀಡಲಾಗ್ತಿದೆ.

ಕರುಣಾನಿಧಿ ಮೂತ್ರದ ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಮನೆಯಲ್ಲಿಯೇ ಆಸ್ಪತ್ರೆ ರೀತಿಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 24 ಗಂಟೆ ಕರುಣಾನಿಧಿ ಆರೋಗ್ಯದ ಮೇಲ್ವಿಚಾರಣೆ ಮಾಡಲಾಗ್ತಿದೆ ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಅರವಿಂದನ್ ಸೆಲ್ವರಾಜ್ ಹೇಳಿದ್ದಾರೆ.

ಕರುಣಾನಿಧಿ ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿ ಕೇಳ್ತಿದ್ದಂತೆ ಪಕ್ಷದ ಕಾರ್ಯಕರ್ತರು ಕರುಣಾನಿಧಿ ಮನೆಗೆ ಬರ್ತಿದ್ದಾರೆ. ರಾಜಕೀಯ ನಾಯಕರು ಕೂಡ ಕರುಣಾನಿಧಿ ಭೇಟಿಗಾಗಿ ಮನೆಗೆ ಬರ್ತಿದ್ದಾರೆ. ಉಪಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಸೇರಿದಂತೆ ಅನೇಕ ಮಂತ್ರಿಗಳು ಕರುಣಾನಿಧಿ ಮನೆಗೆ ಭೇಟಿ ನೀಡಿದ್ದಾರೆ. ರಾಜಕೀಯ ನಾಯಕ ಹಾಗೂ ನಟ ಕಮಲ ಹಾಸನ್ ಕೂಡ ಕರುಣಾನಿಧಿ ಮನೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...