alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಪತ್ರೆಯಾಗಿ ಪರಿವರ್ತನೆಯಾಗಲಿದೆ ಕರುಣಾನಿಧಿ ನಿವಾಸ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಮಂಗಳವಾರದಂದು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕರುಣಾನಿಧಿಯವರ ನಿಧನಕ್ಕೆ ಡಿಎಂಕೆ ನಾಯಕರು ಹಾಗೂ ಕಾರ್ಯಕರ್ತರು ಕಂಬನಿ ಮಿಡಿಯುತ್ತಿದ್ದಾರೆ.

ರಾಜಾಜಿ ಹಾಲ್ ನಲ್ಲಿ ಕರುಣಾನಿಧಿಯವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಭೇಟಿ ನೀಡಿ ತಮ್ಮ ಅಂತಿಮ ನಮನ ಸಲ್ಲಿಸಿದ್ದಾರೆ.

ಈ ಮಧ್ಯೆ, ಕರುಣಾನಿಧಿಯವರು ಐದು ದಶಕಗಳಿಗೂ ಅಧಿಕ ಕಾಲದಿಂದ ವಾಸವಾಗಿದ್ದ ಗೋಪಾಲಪುರಂ ನಿವಾಸವನ್ನು ಇನ್ನು ಮುಂದೆ ಬಡವರ ಆಸ್ಪತ್ರೆ ಆಗಿ ಪರಿವರ್ತನೆ ಮಾಡಲಾಗುವುದು ಎಂದು ತಿಳಿದುಬಂದಿದೆ.

2010 ರಲ್ಲಿ ತಮ್ಮ 86 ನೇ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಕರುಣಾನಿಧಿಯವರು ಈ ನಿವಾಸವನ್ನು ‘ಅಣ್ಣಾ ಅಂಜುಗಂ’ ಎಂಬ ಟ್ರಸ್ಟ್ ಗೆ ದೇಣಿಗೆಯಾಗಿ ನೀಡಿದ್ದು, ಇಲ್ಲಿ ಬಡ ಜನರಿಗಾಗಿ ಆಸ್ಪತ್ರೆ ಆರಂಭಿಸುವಂತೆ ತಿಳಿಸಿದ್ದರೆನ್ನಲಾಗಿದೆ.

ಕರುಣಾನಿಧಿಯವರ ಆಶಯದಂತೆ ಇದೀಗ ಟ್ರಸ್ಟ್ ವತಿಯಿಂದ ‘ಕಲೈನಾರ್ ಕರುಣಾನಿಧಿ ಆಸ್ಪತ್ರೆ’ ಎಂಬ ಹೆಸರಿನಲ್ಲಿ ಬಡ ಜನರ ಸಲುವಾಗಿ ಆಸ್ಪತ್ರೆ ಆರಂಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...