alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್‌ ಸಾಲ ತೀರಿಸದೆ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವಂಚಕರಿಬ್ಬರ ಅರೆಸ್ಟ್

ಬ್ಯಾಂಕ್‌ ಸಾಲ ಮರು ಪಾವತಿಸದೆ, ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸಿದ ಇಬ್ಬರು ಐಷಾರಾಮಿ ಕಾರು ಮಾರಾಟದ ಡೀಲರ್‌ಗಳನ್ನು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಆಡಿ ಹಾಗೂ ಪೋರ್ಶೆ ಕಾರುಗಳ ಮಾರಾಟಗಾರರಾಗಿರುವ ರಶ್‌ ಪಲ್‌ ಸಿಂಗ್‌ ಟೊಡ್‌ ಹಾಗೂ ಮಂಧಿರ್‌ ಸಿಂಗ್‌ ಟೊಡ್‌ ಬಂಧಿತರು. ಬ್ಯಾಂಕ್‌ ನಿಂದ 270 ಕೋಟಿ ರೂ. ಸಾಲ ಮಾಡಿದ್ದ ಅವರು, ವಿದೇಶಕ್ಕೆ ಹೋಗಲು, ವಿಮಾನ ನಿಲ್ದಾಣದಲ್ಲಿದ್ದರು. ಈ ವೇಳೆ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ಎಚ್‌ಡಿಎಫ್‌ಸಿ, ಐಸಿಐಸಿಐ, ಕೆನರಾ, ಜೆ ಆಂಡ್‌ ಕೆ ಬ್ಯಾಂಕ್‌ ಹಾಗೂ ವೋಕ್ಸ್‌ವ್ಯಾಗನ್‌ ಫೈನಾನ್ಸ್‌ನಿಂದ ಒಟ್ಟಾರೆ 270 ಕೋಟಿ ರೂ. ಸಾಲ ಮಾಡಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್‌ 120 ಕೋಟಿ ರೂ. ಸಾಲ ನೀಡಿದೆ ಎನ್ನಲಾಗಿದೆ.

ಗುರುಗ್ರಾಮದಲ್ಲಿ ಜೆನಿಕಾ ಗ್ರೂಪ್‌ ಪೋರ್ಶೆ ಸೆಂಟರ್‌ ಹೊಂದಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ ಆ.29ರಂದು ಸಂಸ್ಥೆ ವಿರುದ್ಧ ಆರ್ಥಿಕ ಅವ್ಯವಹಾರದ ಬಗ್ಗೆ ದೂರು ನೀಡಿತ್ತು. ಬ್ಯಾಲೆನ್ಸ್‌ ಶೀಟ್‌ನಲ್ಲಿ ಲಾಭ ಕಾಣುತ್ತಿದ್ದರೂ, ಕಳೆದ 4 ವರ್ಷದಿಂದ ಸಂಸ್ಥೆ ನಷ್ಟವನ್ನೇ ತೋರಿಸುತ್ತಿದೆ ಎಂದು ದೂರಿನಲ್ಲಿ ದಾಖಲಾಗಿದೆ.

ಸಂಸ್ಥೆ ಆಡಿ ಹಾಗೂ ಪೋರ್ಶೆ ಕಾರುಗಳ ಮಾರಾಟ ಹಾಗೂ ಸರ್ವಿಸ್‌ ನೀಡುತ್ತಿದ್ದು, ಪ್ರತಿ ವರ್ಷ 500 ಕೋಟಿ ರೂ.ಗಳ ಮಾರಾಟ ಹಾಗೂ ಸೇವೆಗಳನ್ನು ನೀಡುತ್ತಿದೆ.

ಪ್ರತಿ ತಿಂಗಳು 140 ಆಡಿ ಹಾಗೂ 18-20 ಪೋರ್ಶೆ ಕಾರುಗಳ ಮಾರಾಟ ನಡೆಯುತ್ತಿದ್ದು, ಆಡಿಯ ಭಾರತದ ಮಾರಾಟದಲ್ಲಿ 5ನೇ ಸ್ಥಾನದಲ್ಲಿದೆ. ಕಾರುಗಳ ಬಿಡಿಭಾಗ, ಡೆಮೊ ಕಾರ್‌, ಹೊಸ ಕಾರುಗಳು ಹಾಗೂ ಬಳಕೆ ಮಾಡಿರುವ ಕಾರುಗಳ ಖರೀದಿಯ ಸಬೂಬು ಹೇಳಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. 32 ಡೆಮೊ ಕಾರುಗಳನ್ನು ಪಡೆದ ಇಬ್ಬರು ಬಂಧಿತರು, ಸಾಲಗಾರರಿಗೆ ಹಣ ಪಾವತಿ ಮಾಡುವ ಬದಲು ಹಣವನ್ನು ಬೇರೆಡೆ ಬಳಸಿರುವುದು ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...