alex Certify
ಕನ್ನಡ ದುನಿಯಾ       Mobile App
       

Kannada Duniya

ಆರೇ ದಿನಕ್ಕೆ ಬಯಲಾಯ್ತು ವಿಧವೆಯ ಅಸಲಿಯತ್ತು

ಇಂದೋರ್: ವೃದ್ಧಾಪ್ಯದಲ್ಲಿ ಯಾರಾದರೂ ಜೊತೆಗಿರಲಿ ಎಂದು 2 ನೇ ಮದುವೆಯಾಗಿದ್ದ ನಿವೃತ್ತ ನೌಕರರೊಬ್ಬರು ಪರಿತಪಿಸುವಂತಾಗಿದೆ. ಅವರನ್ನು ಮದುವೆಯಾಗಿದ್ದ ಮಹಿಳೆ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಕೊನೆಗೂ ಆಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಂದೋರ್ ನ ಮಂದಸೋರ್ ನಿವಾಸಿ ರೂಪ್ ದಾಸ್(60) ವಿದ್ಯುತ್ ಕಂಪನಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. 1992 ರಲ್ಲಿಯೇ ಅವರ ಪತ್ನಿ ಮೃತಪಟ್ಟಿದ್ದು, ಮಕ್ಕಳು ಕೂಡ ಇಲ್ಲದ ಕಾರಣ, ಸಂಬಂಧಿಕರು, ಸ್ನೇಹಿತರು ಮದುವೆಯಾಗುವಂತೆ ಸಲಹೆ ನೀಡಿದ್ದಾರೆ.,

ವೃದ್ಧಾಪ್ಯದಲ್ಲಿ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಅಶೋಕ್ ಕುಮಾರ್ ಎಂಬ ಪರಿಚಯಸ್ಥನ ಮೂಲಕ ರೂಪ್ ದಾಸ್ ವಿಧವೆಯೊಬ್ಬರನ್ನು ಮದುವೆಯಾಗಿದ್ದಾರೆ.

2017 ರ ನವೆಂಬರ್ 18 ರಂದು ಮದುವೆಯಾಗಿದ್ದು, ಮದುವೆಯಾದ 6 ದಿನದಲ್ಲೇ ಮಹಿಳೆ ಮನೆಯಲ್ಲಿದ್ದ 3 ಲಕ್ಷ ರೂ. ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಳೆ. ರೂಪ್ ದಾಸ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು 45 ದಿನಗಳ ಬಳಿಕ ಆರೋಪಿ ಮಹಿಳೆ ಹಾಗೂ ಮದುವೆ ಮಾಡಿಸಿದ್ದ ಅಶೋಕ್ ಕುಮಾರ್ ನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...