alex Certify
ಕನ್ನಡ ದುನಿಯಾ       Mobile App
       

Kannada Duniya

ಊಟ ನೀಡಲು ವಿಳಂಬ ಮಾಡಿದ್ದಕ್ಕೆ ಶಾಸಕನಿಂದ ಹಲ್ಲೆ

p-c-george-75ಊಟ ತರಲು ವಿಳಂಬ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ಶಾಸಕರೋರ್ವರು ಕ್ಯಾಂಟೀನ್ ಹುಡುಗನ ಮೇಲೆ ಹಲ್ಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಪಕ್ಷೇತರ ಶಾಸಕ ಪಿ.ಸಿ. ಜಾರ್ಜ್ ವಿರುದ್ದ ಈ ಆರೋಪ ಕೇಳಿ ಬಂದಿದ್ದು, ಶಾಸಕರ ಭವನದಲ್ಲಿದ್ದ ಪಿ.ಸಿ. ಜಾರ್ಜ್ ಊಟ ತರಲು ಆರ್ಡರ್ ಮಾಡಿದ್ದರು. ಆದರೆ ರಷ್ ಇದ್ದ ಕಾರಣ ಕ್ಯಾಂಟೀನ್ ಹುಡುಗ ಮನು, 20 ನಿಮಿಷ ತಡ ಮಾಡಿದ್ದಾನೆ.

ಅಷ್ಟಕ್ಕೇ ರೊಚ್ಚಿಗೆದ್ದ ಶಾಸಕ ಪಿ.ಸಿ. ಜಾರ್ಜ್ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಮಾನಸಿಕವಾಗಿ ಜರ್ಜರಿತನಾಗಿರುವ ಮನು, ಈ ಕುರಿತು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾನೆ. ಆದರೆ ಹಲ್ಲೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಪಿ.ಸಿ. ಜಾರ್ಜ್ ಅಂತಹ ಯಾವುದೇ ಘಟನೆ ನಡೆದಿಲ್ಲ. ಅದರೆ ಊಟ ತರಲು ವಿಳಂಬ ಮಾಡಿದ್ದಕ್ಕೆ ಆತನಿಗೆ ಬೈದದ್ದು ನಿಜ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...