alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ, ತಮ್ಮನನ್ನೇ ಕತ್ತಲ ಕೋಣೆಯಲ್ಲಿಟ್ಟಿದ್ದ ಮಲಮಗ

ಕಳೆದ ಒಂದು ವರ್ಷದಿಂದ ಕತ್ತಲ ಕೋಣೆಯಲ್ಲಿ ಜಾನುವಾರುಗಳ ರೀತಿ ಜೀವನ ಸಾಗಿಸುತ್ತಿದ್ದ 50 ವರ್ಷದ ಮಹಿಳೆ ಹಾಗೂ ಆಕೆಯ 7 ವರ್ಷದ ಮಗನನ್ನು ಲುಧಿಯಾನಾ ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರದವರು ರಕ್ಷಿಸಿದ್ದಾರೆ.

ದುಗ್ರಿ ಎಂಬಲ್ಲಿ ಸಿ ಆರ್ ಪಿ ಎಫ್ ಕ್ವಾಟರ್ಸ್ ನಲ್ಲಿ ತಾಯಿ, ಮಗನನ್ನು ಆಕೆಯ ಮಲಮಗನೇ ವರ್ಷಗಳಿಂದ ಕೂಡಿಹಾಕಿರುವ ಬಗ್ಗೆ ಸುತ್ತಮುತ್ತಲಿನವರು ನೀಡಿದ ದೂರನ್ನು ಆಧರಿಸಿ ಪರಿಶೀಲಿಸಲಾಗಿ ಈ ಘಟನೆ ಬೆಳಕಿಗೆ ಬಂದಿದೆ.

ಪ್ರಾಧಿಕಾರದವರು ಅವರನ್ನು ಕೂಡಿಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿದಾಗ ಆಕೆ ತೀವ್ರ ಜ್ವರದಿಂದ ಬಳಲುತ್ತಿದ್ದು, ಏಳಲೂ ಆಗದ ಸ್ಥಿತಿಯಲ್ಲಿದ್ದಳು. ಆಕೆಯ ಮಗ ಶಿವನನ್ನು ಮತ್ತೊಂದು ರೂಮಿನಲ್ಲಿ ಕೂಡಿಹಾಕಲಾಗಿತ್ತು.

ಮಹಿಳೆಯ ಪತಿ ಬದುಕಿರುವವರೆಗೂ ಎಲ್ಲವೂ ಸರಿಯಾಗಿತ್ತು. ಆದರೆ ಕಳೆದ ವರ್ಷ ಆತ ತೀರಿಕೊಂಡ ಬಳಿಕ ಪತಿಯ ಮೊದಲನೇ ಹೆಂಡತಿ ಮಗ ಇಬ್ಬರನ್ನೂ ಪ್ರಾಣಿಗಳ ರೀತಿ ಕೂಡಿ ಹಾಕಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...