alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ನಡೆದಿದೆ ಎರಡು ಗುಂಪುಗಳ ಗುಂಡಿನ ಕಾಳಗ

ಲುಧಿಯಾನಾದಲ್ಲಿ ಹಾಡಹಗಲೇ ಎರಡು ಗುಂಪುಗಳ ಮಧ್ಯೆ ಗುಂಡಿನ ಕಾಳಗ ನಡೆದಿದೆ. ಈ ದೃಶ್ಯ ಸಿಸಿ ಟಿವಿಯಲ್ಲೂ ಸೆರೆಯಾಗಿದೆ. ಚಂಡೀಗಢ ರಸ್ತೆಯಲ್ಲಿರುವ ಮೋಹಿನಿ ರೆಸಾರ್ಟ್ ಬಳಿ ನಡೆದ ಘರ್ಷಣೆ ಇದು.

ನಡುರಸ್ತೆಯಲ್ಲೇ ಎರಡು ಗುಂಪುಗಳು ಪರಸ್ಪರ ಗುಂಡು ಹಾರಿಸಿಕೊಂಡಿವೆ. ಲಾಠಿ, ಕತ್ತಿ, ಖಡ್ಗ ಹಾಗೂ ಪಿಸ್ತೂಲ್ ತಂದಿದ್ದ ದುಷ್ಕರ್ಮಿಗಳು, ಸಂಜೆ 4.22 ರ ವೇಳೆಗೆ ರಸ್ತೆಯಲ್ಲೇ ಬಡಿದಾಟ ಶುರು ಮಾಡಿದ್ದರು.

ಘಟನೆಯಲ್ಲಿ ಓರ್ವ ಗುಂಡು ತಗುಲಿ ಗಾಯಗೊಂಡಿದ್ದಾನೆ ಎನ್ನಲಾಗ್ತಿದೆ. ಪೊಲೀಸರು ಬರುವಷ್ಟರಲ್ಲಿ ಎರಡೂ ಗುಂಪಿನವರು ಸ್ಥಳದಿಂದ ಪರಾರಿಯಾಗಿದ್ದರು. ಓರ್ವ ಮೋಟರ್ ಸೈಕಲ್ ಅನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾನೆ. ಘರ್ಷಣೆಗೆ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...