alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಗಲೆ ಧ್ವಂಸ ವಿವಾದ: ಪತ್ರಿಕಾಗೋಷ್ಠಿ ನಡೆಸಿದ ಅಖಿಲೇಶ್

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದಾರೆ. ಅಖಿಲೇಶ್ ಯಾದವ್ ಸರ್ಕಾರಿ ಬಂಗಲೆ ಖಾಲಿ ಮಾಡಿದಾಗಿಂದ ಸುದ್ದಿಯಲ್ಲಿದ್ದಾರೆ. ಸರ್ಕಾರಿ ಬಂಗಲೆ ಧ್ವಂಸಗೊಳಿಸಿ ಹಾನಿ ಮಾಡಿದ್ದಾರೆಂಬ ಆರೋಪ ಅವ್ರ ಮೇಲಿದೆ.

ರಾಜ್ಯಪಾಲ ರಮಾ ನಾಯಕ್ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಸಿಎಂ ಯೋಗಿಗೆ ಸೂಚನೆ ನೀಡಿದ್ದರು. ಈ ಸಂಬಂಧ ಬುಧವಾರ ಪ್ರತಿಕಾಗೋಷ್ಠಿ ನಡೆಸಿದ ಅಖಿಲೇಶ್ ಯಾದವ್, ಸಿಎಂ ಯೋಗಿ ವಿರುದ್ಧ ಕಿಡಿ ಕಾರಿದ್ದಾರೆ. ಯೋಗಿ ರಾಜ್ಯದಲ್ಲಿ ರಾಜಕೀಯ ಬದಲಾಗಿದೆ ಎಂದ ಅಖಿಲೇಶ್, ಮಾತಿನ ಮಧ್ಯೆ ಸರ್ಕಾರಿ ಅಧಿಕಾರಿಗಳ ಕಾಲೆಳೆದಿದ್ದಾರೆ.

ಸರ್ಕಾರಿ ಬಂಗಲೆಯನ್ನು ನನ್ನಿಷ್ಟದಂತೆ ಸಿದ್ಧಪಡಿಸಿದ್ದೆ. ಅಲ್ಲಿನ ದೇವರ ಕೋಣೆ ಸೇರಿದಂತೆ ಅನೇಕ ವಸ್ತುಗಳು ನನ್ನಿಷ್ಟದಂತೆ ನಿರ್ಮಾಣವಾಗಿದ್ದು. ಅದ್ರಲ್ಲಿ ನನಗಿಷ್ಟವಾದ ವಸ್ತುಗಳನ್ನು ತೆಗೆದುಕೊಂಡು ಬಂದಿದ್ದೇನೆ. ಸರ್ಕಾರಿ ದಾಖಲೆಯಲ್ಲಿ ಇದ್ರ ಬಗ್ಗೆ ಉಲ್ಲೇಖವಿದ್ದರೆ ನನಗೆ ತೋರಿಸಿ. ನಾನು ಬಂಗಲೆ ಖಾಲಿ ಮಾಡಿದ ನಂತ್ರ ಒಎಸ್ಡಿ ಹಾಗೂ ಐಎಎಸ್ ಅಧಿಕಾರಿ ಅಲ್ಲಿಗೆ ಹೋಗಿದ್ದರು. ಜೊತೆಯಲ್ಲಿ ಕ್ಯಾಮರಾ ಹಿಡಿದು ಹೋಗಿದ್ದರು. ಅವ್ರು ಯಾಕೆ ಅಲ್ಲಿಗೆ ಹೋಗಿದ್ದರು ಎಂದು ಅಖಿಲೇಶ್ ಪ್ರಶ್ನೆ ಮಾಡಿದ್ದಾರೆ. ಉಪ ಚುನಾವಣೆ ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಲಾಗ್ತಿದೆ ಎಂದಿರುವ ಅಖಿಲೇಶ್ ರಾಜ್ಯಪಾಲರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...