alex Certify
ಕನ್ನಡ ದುನಿಯಾ       Mobile App
       

Kannada Duniya

ಶಂಕಿತ ಉಗ್ರ ಸೈಫುಲ್ಲಾ ಫಿನಿಶ್

up-terror

ಲಖ್ನೋ: ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ, ಶಂಕಿತ ಉಗ್ರ ಸೈಫುಲ್ಲಾನನ್ನು ಭಯೋತ್ಪಾದನಾ ನಿಗ್ರಹ ಪಡೆ(ಎ.ಟಿ.ಎಸ್.) ಕಮಾಂಡೊಗಳು ಹೊಡೆದುರುಳಿಸಿದ್ದಾರೆ.

ಲಖ್ನೋ ಹೊರವಲಯದ ಠಾಕೂರ್ ಗಂಜ್ ನ ಮನೆಯೊಂದರಲ್ಲಿ ಅವಿತಿದ್ದ ಸೈಫುಲ್ಲಾನನ್ನು ಜೀವಂತವಾಗಿ ಸೆರೆ ಹಿಡಿಯಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು, ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.

ಆತ ಗುಂಡಿನ ದಾಳಿ ನಡೆಸಿದಾಗ, ಕಮಾಂಡೊಗಳು ಮೆಣಸಿನಪುಡಿ ಬಾಂಬ್, ಅಶ್ರುವಾಯು ಸಿಡಿಸಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ಆತನನ್ನು ಹತ್ಯೆ ಮಾಡಲಾಗಿದೆ.

ಉತ್ತರ ಪ್ರದೇಶ ಎ.ಡಿ.ಜಿ.ಪಿ. ದಲ್ಜೀತ್ ಚೌಧರಿ ಈ ಕುರಿತು ಮಾಹಿತಿ ನೀಡಿದ್ದು, ಶರಣಾಗುವಂತೆ ಸೂಚಿಸಿದರೂ, ಸೈಫುಲ್ಲಾ ಒಪ್ಪದೇ ಗುಂಡಿನ ದಾಳಿ ನಡೆಸಿದ. ಆತನನ್ನು ಹೊಡೆದುರುಳಿಸಲಾಗಿದೆ. ಸ್ಥಳದಲ್ಲಿ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಸೈಫುಲ್ಲಾ ಐಸಿಸ್ ನೊಂದಿಗೆ ನಂಟು ಹೊಂದಿದ್ದು, ರೈಲು ದುರಂತಕ್ಕೆ ಕಾರಣನಾಗಿದ್ದ. ಚುನಾವಣೆಯಲ್ಲೂ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...