alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಜೊತೆಗೆ ನಾನ್ ವೆಜ್ ಜಗಳದ ಬಳಿಕ ದುಡುಕಿದ ಡಾಕ್ಟರ್

ಲಖ್ನೋನ ಗೋಮ್ತಿ ನಗರದಲ್ಲಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಂಸಾಹಾರ ಸೇವನೆಗೆ ಸಂಬಂಧಪಟ್ಟಂತೆ ಪತ್ನಿಯ ಜೊತೆಗೆ ಜಗಳವಾಡಿದ್ದ ಆತ ನಂತರ ಸಾವಿಗೆ ಶರಣಾಗಿದ್ದಾರೆ.

ಚರ್ಮತಜ್ಞರಾಗಿದ್ದ ಡಾ.ಉಮಾಶಂಕರ್ ಗುಪ್ತಾ ಬುಧವಾರ ತಮಗೆ ಮತ್ತು 6 ವರ್ಷದ ಮಗಳು ಆರಾಧ್ಯಾಗಾಗಿ ನಾನ್ ವೆಜ್ ಫುಡ್ ತಂದಿದ್ದರು. ನಿದ್ದೆ ಮಾಡ್ತಿದ್ದ ಮಗಳನ್ನು ಎಬ್ಬಿಸಿ ಅವಳ ಜೊತೆ ಕುಳಿತು ಒಟ್ಟಿಗೆ ಅದನ್ನು ತಿಂದಿದ್ದರು.

ಈ ವಿಷಯ ಗೊತ್ತಾಗ್ತಿದ್ದಂತೆ ಪತ್ನಿ ದೀಪ್ತಿ ಅಗರ್ವಾಲ್ ಜಗಳ ಶುರು ಮಾಡಿದ್ದಾಳೆ. ಮಗಳಿಗೆ ನಾನ್ ವೆಜ್ ತಿನ್ನಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಆಗ ರಾತ್ರಿ 11.30ರ ಸಮಯ, ಜಗಳದ ನಂತರ ಡಾ.ಉಮಾಶಂಕರ್ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು.

ಅರ್ಧ ಗಂಟೆ ಬಳಿಕ ದೀಪ್ತಿ ಕೋಣೆಯ ಬಾಗಿಲು ತೆರೆಯುವಂತೆ ಕೇಳಿದ್ದಾಳೆ. ಆದ್ರೆ ಉಮಾಶಂಕರ್ ಉತ್ತರಿಸಿಲ್ಲ. ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡಿದ್ದಾಳೆ. ಕೊನೆಗೆ ಫೋನ್ ಕರೆ ಮಾಡಿದ್ದಾಳೆ. ಅದನ್ನು ಕೂಡ ಉಮಾಶಂಕರ್ ರಿಸೀವ್ ಮಾಡಲಿಲ್ಲ.

ಹೆದರಿದ ದೀಪ್ತಿ ಉಮಾಶಂಕರ್ ಸಹೋದ್ಯೋಗಿಗೆ ವಿಷಯ ತಿಳಿಸಿದ್ಲು. ಅಕ್ಕಪಕ್ಕದವರನ್ನು ಕರೆತಂದ್ಲು. ಕೋಣೆಯ ಬಾಗಿಲು ಒಡೆದು ನೋಡಿದಾಗ ಉಮಾಂಶಕರ್ ಶವ ಫ್ಯಾನ್ ಗೆ ನೇತಾಡುತ್ತಿತ್ತು. ಆದ್ರೆ ಕೋಣೆಯಲ್ಲಿ ಡೆತ್ ನೋಟ್ ಪತ್ತೆಯಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...