alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಕೇಸುಗಳೆಷ್ಟು ಗೊತ್ತಾ…?

ಭಾರತದ ಸುಪ್ರೀಂಕೋರ್ಟ್ ಮತ್ತು ರಾಜ್ಯ ಹೈಕೋರ್ಟ್ ಗಳನ್ನು ಹೊರತುಪಡಿಸಿ ಇಡೀ ದೇಶದ ಕೆಳ ಹಂತದ ನ್ಯಾಯಾಲಯಗಳು ಲಕ್ಷಾಂತರ ಕೇಸುಗಳನ್ನ ಬಾಕಿ ಉಳಿಸಿಕೊಂಡಿರುವ ಶಾಕಿಂಗ್ ಅಂಶ ಈಗ ಬಹಿರಂಗವಾಗಿದೆ. ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ಕೆಳ ಹಂತದ ನ್ಯಾಯಾಲಯಗಳಲ್ಲಿ ಒಟ್ಟು 22 ಲಕ್ಷ ಪ್ರಕರಣಗಳು ಇನ್ನೂ ಇತ್ಯರ್ಥವಾಗದೆ ಉಳಿದುಕೊಂಡಿವೆ.

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ನೀಡಿರುವ ಮಾಹಿತಿಯ ಪ್ರಕಾರ 22,90,364 ಪ್ರಕರಣಗಳು 10 ವರ್ಷಗಳಿಂದ ಇತ್ಯರ್ಥವಾಗದೆ ಇನ್ನೂ ವಿಚಾರಣೆಯ ಹಂತದಲ್ಲಿದೆ. ಈ ಪೈಕಿ 5,97,595 ಸಿವಿಲ್ ಪ್ರಕರಣಗಳಾಗಿದ್ದು 16,92,769 ಕ್ರಿಮಿನಲ್ ಪ್ರಕರಣಗಳಾಗಿದೆ.
ಸಿವಿಲ್ ಕೇಸುಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿ ಮತ್ತು ಸಂಸ್ಥೆಗಳ ನಡುವಿನ ಜಟಾಪಟಿಯಿಂದ ಕೂಡಿರುತ್ತವಂತೆ. ಅದೇ ರೀತಿ ಕ್ರಿಮಿನಲ್ ಕೇಸ್ ಗಳಲ್ಲಿ ಸಮಾಜಕ್ಕೆ ವ್ಯಕ್ತಿಯಿಂದ ಹಾನಿಯಾಗುವ ಸಂಭವ ಇರುತ್ತದಂತೆ.

ನ್ಯಾಷನಲ್ ಜುಡಿಷಿಯಲ್ ಡೇಟಾ ಗ್ರಿಡ್ ಪ್ರಕರಣಗಳ ವಿವರಗಳನ್ನು ಕಂಪ್ಯುಟರೀಕರಣಗೊಳಿಸುತ್ತಿರುವ ಅಂಗ ಸಂಸ್ಥೆಯಾಗಿದೆ. ಅದರ ಜೊತೆ ಜೊತೆಗೆ ಈ ಸಂಸ್ಥೆಯೇ ಈಗ ಬಾಕಿ ಉಳಿಸಿಕೊಂಡಿರುವ ಕೇಸುಗಳನ್ನು ಇತ್ಯರ್ಥಗೊಳಿಸಲು ಕೋರ್ಟ್ ಗೆ ಮನವರಿಕೆ ಮಾಡಿಕೊಡ್ತಿದೆಯಂತೆ.

ಬಾಕಿ ಉಳಿದಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ವಿಭಾಗಿಸಿರುವ ನ್ಯಾಷನಲ್ ಜುಡಿಷಿಯಲ್ ಡೇಟಾ ಗ್ರಿಡ್ ಈ ಮಾಹಿತಿಯನ್ನ ಸರ್ಕಾರಕ್ಕೆ ಮತ್ತು ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ. ಆ ಪ್ರಕಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ದೇಶದ 24 ಹೈಕೋರ್ಟ್ ಮತ್ತು ತ್ವರಿತಗತಿ ನ್ಯಾಯಾಲಯಗಳಿಗೆ ಬೇಗನೆ ಪ್ರಕರಣಗಳನ್ನ ಮುಗಿಸುವಂತೆ ಸೂಚನೆ ನೀಡಿದ್ದಾರೆ.

ಕೇಂದ್ರ ಕಾನೂನು ಸಚಿವಾಲಯ ಕೂಡ ರಾಜ್ಯ ಹೈಕೋರ್ಟ್ ಗಳಿಗೆ ಕೆಳ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಸೂಚಿಸಿದೆ. ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚುವರಿ ನ್ಯಾಯಪೀಠಗಳ ಸ್ಥಾಪನೆ ಮಾಡಿ ನ್ಯಾಯಾಧೀಶರನ್ನು ನೇಮಕ ಮಾಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...