alex Certify
ಕನ್ನಡ ದುನಿಯಾ       Mobile App
       

Kannada Duniya

ಓಡಿ ಹೋಗಿದ್ದ ಪ್ರೇಮಿಗಳ ಜೊತೆ ಮೃಗವಾದ ಗ್ರಾಮಸ್ಥರು

beat-1_1466713433

ರಾಜಸ್ಥಾನದ ಕನೋಡಾ ಗ್ರಾಮಸ್ಥರು ಪ್ರೇಮಿಗಳಿಗೆ ಬುದ್ಧಿ ಕಲಿಸುವ ನೆಪದಲ್ಲಿ ಮೃಗಗಳಂತೆ ವರ್ತಿಸಿದ್ದಾರೆ. ಮದುವೆಯಾದ ಮಹಿಳೆ ಜೊತೆ ಹುಡುಗ ಓಡಿ ಹೋಗಿದ್ದ. ಅವರನ್ನು ಹಿಡಿದು ತಂದ ಗ್ರಾಮಸ್ಥರು ಬಟ್ಟೆ ಬಿಚ್ಚಿ, ಎರಡು ದಿನ ದೇವಿ ಮಂದಿರದ ಮುಂದೆ ಕಟ್ಟಿ ಹಾಕಿದ್ದಾರೆ.

28 ವರ್ಷದ ಲಾಲು ರಾಮ್ ಹಾಗೂ 26 ವರ್ಷದ ಮಹಿಳೆ ಶಾಂತಾ ನಡುವೆ ಪ್ರೀತಿ ಚಿಗುರೊಡೆದಿತ್ತು. ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದು ಓಡಿ ಹೋಗಿದ್ದರು. ಅವರನ್ನು ಹಿಡಿದು ತಂದ ಗ್ರಾಮಸ್ಥರು ಮೊದಲು ಇಬ್ಬರನ್ನೂ ಕಟ್ಟಿಹಾಕಿದ್ದಾರೆ. ನಂತ್ರ ಬಟ್ಟೆ ಬಿಚ್ಚಿ ಊರ ತುಂಬ ಮೆರವಣಿಗೆ ಮಾಡಿದ್ದಾರೆ. ನಂತ್ರ ದೇವಿ ದೇವಸ್ಥಾನದ ಮುಂದೆ ಎರಡು ದಿನ ಕಟ್ಟಿ ಹಾಕಿದ್ದಾರೆ.

ಘಟನೆ ತಿಳಿದು ಮಹಿಳೆ ಕಡೆಯವರು ರಕ್ಷಣೆಗೆ ಬಂದಿದ್ದಾರೆ. ಆದ್ರೆ ಅವರನ್ನು ಕೂಡ ಗ್ರಾಮಸ್ಥರು ಕೂಡಿ ಹಾಕಿದ್ದಾರೆ. ಘಟನೆಯಾಗಿ ಮೂರು ದಿನಗಳ ನಂತ್ರ ಸ್ಥಳಕ್ಕೆ ಬಂದ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಹುಡುಗನನ್ನು ಬಿಡಲು 2 ಲಕ್ಷ ಕೊಡುವಂತೆ ಗ್ರಾಮಸ್ಥರು ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ನಂತ್ರ 80 ಸಾವಿರ ಪಡೆದು ಹುಡುಗನನ್ನು ಬಿಟ್ಟಿದ್ದಾರೆ. ಆದ್ರೆ ಮಹಿಳೆ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...