alex Certify
ಕನ್ನಡ ದುನಿಯಾ       Mobile App
       

Kannada Duniya

ಪರ ಪುರುಷರ ಕಣ್ಣಿಗೆ ಪ್ರೇಯಸಿ ಸುಂದರವಾಗಿ ಕಾಣಬಾರದೆಂದು ಈತ ಮಾಡಿದ್ದೇನು?

ಅಬ್ಬಾ ಇದೆಂತಹ ಭಯಂಕರವಾದ ಪ್ರೀತಿ. ಅನುಮಾನಕ್ಕೆ ಮದ್ದಿಲ್ಲ ಅಂತಾರೆ ಆದರೆ ಅದು ಮಾಡಿಸುವ ಅವಾಂತರಗಳಿಗೆ ಮಿತಿನೂ ಇಲ್ಲ ಅನ್ಸತ್ತೆ ಈ ಸ್ಟೋರಿ ಓದಿದ್ರೆ….

ಈ ಪ್ರಿಯಕರ ಮಹಾಶಯ ಬೇರೆಯವರ ಕಣ್ಣಿಗೆ ತನ್ನ ಪ್ರಿಯತಮೆ ಸುಂದರವಾಗಿ ಕಾಣಬಾರದು ಎಂದು ಆಕೆಯ ಮುಂದಿನ ಎರಡು ಹಲ್ಲುಗಳನ್ನೇ ಕೀಳಿಸಿದ್ದಾನೆ. ಸಾಲದ್ದಕ್ಕೆ ಆಕೆ ಕೆಲಸವನ್ನೂ ಬಿಡಿಸಿ, ಮನೆಯಲ್ಲೂ ಬಿಡದೇ ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡು ತಾನು ಹೋದಲೆಲ್ಲಾ ಕರೆದೊಯ್ಯುತ್ತಾನೆ. ಇದನ್ನು ಪ್ರೀತಿ ಅನ್ನಬೇಕೋ ಅಥವಾ ಭೀತಿ ಅನ್ನಬೇಕೊ ಗೊತ್ತಿಲ್ಲ. ಇಂಥದ್ದೊಂದು ವಿಲಕ್ಷಣ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಅಹಮದಾಬಾದ್ ನ ಮಹಿಳೆಯೊಬ್ಬರು 15 ವರ್ಷಗಳ ಹಿಂದೆ ಆಟೋ ಚಾಲಕನೊಬ್ಬನನ್ನು ಪ್ರೀತಿಸಿ, ತನ್ನ ಪತಿ-ಮಕ್ಕಳನ್ನು ಬಿಟ್ಟು ಓಡಿ ಬಂದಿದ್ದರು. ಆಟೋ ಚಾಲಕ ಕೂಡ ತನ್ನ ಹೆಂಡತಿ-ಮಕ್ಕಳನ್ನು ಬಿಟ್ಟು ಈಕೆಯೊಂದಿಗೆ ಬಂದಿದ್ದ. ಸ್ವತಃ ಮಹಿಳೆ ಹೇಳುವ ಪ್ರಕಾರ 14 ವರ್ಷಗಳ ಕಾಲ ಈ ಪ್ರೇಮಿಗಳ ಜೀವನ ಚೆನ್ನಾಗಿಯೇ ಇತ್ತಂತೆ. ಆದರೆ ಕಳೆದ ಒಂದು ವರ್ಷದಿಂದ ಆಕೆಯ ಪ್ರೇಮಿ, ಪ್ರಿಯತಮೆ ಮೇಲೆ ಅತಿಯಾದ ಪೊಸೆಸಿವ್‌ನೆಸ್ ಬೆಳೆಸಿಕೊಂಡು, ಬರಬರುತ್ತ ವಿಲಕ್ಷಣತೆ ಮೆರೆಯತೊಡಗಿದ್ದ.

ಆಕೆ ಕೆಲಸಕ್ಕೆ ಹೋಗದಂತೆ ತಡೆದ, ಬಳಿಕ ಬೇರಾವ ಪುರುಷರನ್ನೂ ಆಕರ್ಷಿಸಬಾರದೆಂದು ಆಕೆಯ ಮುಂದಿನ ಎರಡು ಹಲ್ಲನ್ನು ಕೀಳಿಸಿದ್ದ. ಮನೆಯೊಳಗಿದ್ದರೂ ಆಕೆಯಯನ್ನು ಯಾರೂ ನೋಡದಿರಲೆಂದು ಕಿಟಕಿ, ಬಾಗಿಲಿಗೆ ಪ್ಲಾಸ್ಟಿಕ್ ಶೀಟ್ ಅಂಟಿಸಿದ್ದ. ಅಷ್ಟಾದರೂ ಅವನ ಪೊಸೆಸಿವ್ ನೆಸ್ ಇನ್ನೂ ಹೆಚ್ಚಾಗತೊಡಗಿ ಅನುಮಾನ ನೆತ್ತಿಗೇರಿತ್ತು. ಕೊನೆಗೆ ಆಕೆಯನ್ನ ಮನೆಯಲ್ಲಿರಲೂ ಬಿಡದೇ ಆಟೋದಲ್ಲಿ ಅವನ ಪಕ್ಕದಲ್ಲೇ ಕುಳ್ಳಿರಿಸಿಕೊಂಡು ಇಡೀ ದಿನ ಆಟೋ ಓಡಿಸುತ್ತಿದ್ದ. ಪ್ರಿಯಕರನ ಈ ವಿಲಕ್ಷಣತೆ ಮಿತಿ ಮೀರಿದಾಗ ಬೇಸತ್ತ ಮಹಿಳೆ, ಕಳೆದ ಬುಧವಾರ ಆತನೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ದಾರಿ ಮಧ್ಯೆ ಆಟೋದಿಂದ ಕೆಳಗೆ ಜಿಗಿದು ತಪ್ಪಿಸಿಕೊಂಡಿದ್ದಾಳೆ.

ಬಳಿಕ ಸಹಾಯವಾಣಿ 181 (ಅಭಯಂ) ಸಂಪರ್ಕಿಸಿ, ಆಪ್ತ ಸಮಾಲೋಚಕರ ಬಳಿ ತನ್ನ ಸಂಗಾತಿಯ ಹಿಂಸೆಯನ್ನು ಬಿಚ್ಚಿಟ್ಟಿದ್ದಾರೆ. ಆಕೆಯ ಪ್ರಿಯತಮನನ್ನೂ ಕರೆಸಿದ ಅಭಯಂ ಸಮಾಲೋಚಕರು ಆತನಿಗೆ ಬುದ್ಧಿ ಹೇಳಿದ್ದಾರೆ. ಇನ್ನು ಮುಂದೆ ಆಕೆಯ ಮೇಲೆ ಅನುಮಾನ ಪಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾನೆ. ಅಂತಿಮವಾಗಿ ಈಕೆಯ ಕಥೆ ಸುಖಾಂತ್ಯ ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...