alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿ ಹುಡುಕಿಕೊಂಡು ಅಲೆದಾಡುತ್ತಿದೆ ಈ ಹುಲಿ…!

ಗಂಡು ಹುಲಿಯೊಂದು ಕಳೆದ ಒಂದು ವರ್ಷದಿಂದ ಸಂಗಾತಿಯನ್ನು ಹುಡುಕಿಕೊಂಡು ಕಾಡು ಮೇಡು ಅಲೆಯುತ್ತಿದೆ. ಮಧ್ಯಪ್ರದೇಶದ ದೇವಸ್, ಧರ್, ಉಜ್ಜೈನ್ ಮತ್ತು ಜಬುವಾ ಜಿಲ್ಲೆಗಳಲ್ಲಿರುವ ಅರಣ್ಯದಲ್ಲೆಲ್ಲ ಸುತ್ತಾಡಿದೆ. ಒಂದು ವರ್ಷದಲ್ಲಿ ಈ ಹುಲಿ ಸುಮಾರು 250 ಕಿಮೀ ದೂರ ಸಂಚರಿಸಿದೆ.

ಈ ಗಂಡು ಹುಲಿಗೆ ಸುಮಾರು 3 ವರ್ಷ ಪ್ರಾಯ. ವಿಪರ್ಯಾಸ ಅಂಧ್ರೆ ಮಧ್ಯಪ್ರದೇಶದ ಈ ಕಾಡುಗಳಲ್ಲಿ ಒಂದೇ ಒಂದು ಹೆಣ್ಣು ಹುಲಿಯೂ ಇಲ್ಲವಂತೆ. ಹಾಗಾಗಿ ಸಂಗಾತಿ ಸಿಗದೇ ಗಂಡು ಹುಲಿ ಬೇಸತ್ತಿದೆ. ಕಳೆದ ಜನವರಿಯಲ್ಲಿ ಗಂಡು ಹುಲಿ ದೇವಾಸ್ ನಲ್ಲಿ ಕಾಣಿಸಿಕೊಂಡಿತ್ತು. ಅದನ್ನು ಹಿಡಿಯಲು ಅರಣ್ಯ ಇಲಾಖೆ ಮಾಡಿದ ಪ್ರಯತ್ನ ಸಫಲವಾಗಲಿಲ್ಲ.

ತನ್ನನ್ನು ಸೆರೆಹಿಡಿಯಲು ಪ್ರಯತ್ನಿಸಲಾಗ್ತಿದೆ ಅನ್ನೋದು ಗೊತ್ತಾಗ್ತಿದ್ದಂತೆ ಅಲರ್ಟ್ ಆದ ಹುಲಿ ಮತ್ತೆ ಮನುಷ್ಯರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿತ್ತು. ಮಾಹಿ ನದಿ ತೀರದ ಸುತ್ತ ಸಂಗಾತಿಯನ್ನು ಹುಡುಕಿಕೊಂಡು ನಡೆದಿದೆ. ಕಾಡಿನಲ್ಲಿದ್ದ ಹಂದಿಗಳು ಹುಲಿ ಬಾಯಿಗೆ ಬಿದ್ದಿವೆ.

ಎರಡು ದಿನಗಳ ಹಿಂದಷ್ಟೆ ಜಬುವಾ ಜಿಲ್ಲೆಯ ಕಸರ್ಬರ್ದಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದೆ. ಅಲ್ಲಿ ಹಸುವೊಂದನ್ನು ಕೊಂದು ತಿಂದಿದೆ. ಗ್ರಾಮಸ್ಥರಲ್ಲಿ ಭಯ ಆವರಿಸಿದ್ದು, ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹೊಂಚು ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...