alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮ ನಿವೇದನೆಗೆ ಒಪ್ಪದ ಯುವತಿಗೆ ಚಾಕು ಇರಿತ

ತನ್ನ ಪ್ರೇಮ ನಿವೇದನೆಯನ್ನು ಯುವತಿ ತಿರಸ್ಕರಿಸಿದಳೆಂಬ ಕಾರಣಕ್ಕೆ ಕಿರಾತಕನೊಬ್ಬ ಆಕೆಗೆ ಚಾಕುವಿನಿಂದ ಮನಬಂದಂತೆ ಇರಿದಿರುವ ಘಟನೆ ತೆಲಂಗಾಣದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ತನ್ನನ್ನು ಪ್ರೀತಿಸುವಂತೆ ಹಲವು ದಿನಗಳಿಂದ ಯುವತಿಯ ಬೆನ್ನ ಹಿಂದೆ ಬಿದ್ದಿದ್ದ ಈ ಯುವಕ ಪ್ರೇಮಿಗಳ ದಿನದ ಸಂದರ್ಭದಲ್ಲಿ ಪ್ರಪೋಸ್ ಮಾಡಿದ್ದನೆನ್ನಲಾಗಿದ್ದು, ಇದಕ್ಕೆ ಒಪ್ಪದಿದ್ದಾಗ ಈ ದುಷ್ಕೃತ್ಯ ಎಸಗಿದ್ದಾನೆ.

ಸಾರ್ವಜನಿಕರ ಸಮ್ಮುಖದಲ್ಲೇ ಈ ಕೃತ್ಯ ಎಸಗಿದ್ದು, ಯುವತಿಗೆ ರಕ್ಷಣೆಗೆ ಬಂದವರ ಮೇಲೂ ಯುವಕ ಹಲ್ಲೆ ಮಾಡಿದ್ದಾನೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...