alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಾಲಂಟೈನ್ ಡೇ ಸ್ಪೆಷಲ್, ಬಾಡಿಗೆಗೆ ಸಿಗ್ತಾನೆ ಬಾಯ್ ಫ್ರೆಂಡ್…!

ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮಿಗಳ ದಿನಕ್ಕಾಗಿ ವಿಶೇಷ ಸಂದೇಶ, ಗಿಫ್ಟ್ ಗಳ ಬಗ್ಗೆ ಸಾಕಷ್ಟು ಪೋಸ್ಟ್ ಗಳು ಹರಿದಾಡ್ತಿವೆ. ಆ ದಿನ ನಿಮಗೂ ಒಬ್ಬ ಬಾಯ್ ಫ್ರೆಂಡ್ ಬೇಕು ಅನಿಸಿದ್ರೆ ಬಾಡಿಗೆಗೆ ಪಡೆಯಬಹುದು. ಇಂಥದ್ದೊಂದು ವಿಶೇಷ ಆಫರ್ ಕೊಟ್ಟಿದ್ದಾನೆ ಗುರ್ಗಾಂವ್ ನ ಯುವಕ.

26 ವರ್ಷದ ಶಾಕುಲ್ ಗುಪ್ತಾ ಒಬ್ಬ ಉದ್ಯಮಿ. ತನ್ನನ್ನೇ ತಾನು ಬಾಡಿಗೆಗೆ ಇಟ್ಟಿದ್ದಾನೆ. ವ್ಯಾಲಂಟೈನ್ ಡೇ ದಿನ ಬಾಡಿಗೆ ಕೊಟ್ರೆ ಒಂದು ದಿನದ ಮಟ್ಟಿಗೆ ಈತ ನಿಮ್ಮ ಪ್ರೇಮಿಯಾಗಿರ್ತಾನೆ. ಕೈಹಿಡಿದುಕೊಳ್ಳೋದ್ರಿಂದ ಹಿಡಿದು ಏನ್ಬೇಕಾದ್ರೂ ಮಾಡ್ಬಹುದು, ಆದ್ರೆ ಎಲ್ಲವೂ ಪ್ಯಾಕೇಜ್ ಲೆಕ್ಕದಲ್ಲಿ ಎನ್ನುತ್ತಿದ್ದಾನೆ.

ಅಷ್ಟೇ ಅಲ್ಲ ನಿಮಗಾಗಿ ರುಚಿಯಾದ ಅಡುಗೆ ಮಾಡಿ ಬಡಿಸ್ತಾನಂತೆ. ಜೊತೆಯಾಗಿ ನೆಟ್ ಫ್ಲಿಕ್ಸ್ ನೋಡೋಣ ಅಂತಾನೂ ಆಫರ್ ಕೊಟ್ಟಿದ್ದಾನೆ. ತಾನೊಬ್ಬ ಒಳ್ಳೆ ಹುಡುಗ ಅಂತಾ ಹೊಗಳಿಕೊಂಡಿದ್ದಾನೆ. ಅಷ್ಟೇ ಅಲ್ಲ ಫ್ರೀಯಾಗಿ ಆಡಿ ಕಾರಲ್ಲಿ ರೈಡ್ ಕೂಡ ಮಾಡಿಸ್ತಾನಂತೆ.

ಆದ್ರೆ ಕೆಲವೊಂದು ಷರತ್ತುಗಳಿವೆ. ಜಿರಳೆಯಿಂದ ನಿಮ್ಮನ್ನು ಬಚಾವ್ ಮಾಡುವುದು ಗುಪ್ತಾಗೆ ಅಸಾಧ್ಯವಂತೆ. ಸೀ ಫುಡ್ ತಿನ್ನಲು ಸಾಧ್ಯವಿಲ್ಲ ಎಂದಿದ್ದಾನೆ. ಅಷ್ಟೇ ಅಲ್ಲ ಫ್ಯಾಷನ್, ಬ್ಯೂಟಿ ಬಗ್ಗೆ ಹರಟಲು ಆತ ರೆಡಿಯಿಲ್ಲ. ಕಳೆದ ಬಾರಿ ಕೂಡ ಗುಪ್ತಾ ಇಂಥದ್ದೇ ಆಫರ್ ಕೊಟ್ಟಿದ್ದ, ಅದಕ್ಕೆ 2000 ಅಪ್ಲಿಕೇಶನ್ ಗಳು ಬಂದಿದ್ದವಂತೆ.

VALENTINE'S DAY BOYFRIEND RENTAL 00:00 – 23:59 14th Feb 2018 Package 1:Holding hands & putting arm around the…

Posted by Shakul on Saturday, February 10, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...