alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇವಾಲಯದಲ್ಲಿ ‘ಪ್ರೇಮ ವಿವಾಹ’ ಕ್ಕೆ ಬಿತ್ತು ಬ್ರೇಕ್

love-marriages-banned-at-karimnagar-temple-after-murder‘ಪ್ರೇಮ ವಿವಾಹ’ ವನ್ನು ನಡೆಸಿಕೊಡುತ್ತಿದ್ದ ಕಾರಣಕ್ಕಾಗಿಯೇ ಪ್ರಸಿದ್ದಿ ಪಡೆದಿದ್ದ ತೆಲಂಗಾಣದ ಕರೀನಗರದ ತಿಮ್ಮಾಪುರ್ ಮಂಡಲ್ ವ್ಯಾಪ್ತಿಯ ಎಲ್ಎಂಡಿ ಕಾಲೋನಿಯಲ್ಲಿರುವ ಟಪಾಲ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಇನ್ನು ಮುಂದೆ ಪ್ರೇಮ ವಿವಾಹಕ್ಕೆ ಬ್ರೇಕ್ ಹಾಕಲಾಗಿದೆ. ಆಡಳಿತ ಮಂಡಳಿ ‘ಪ್ರೇಮ ವಿವಾಹ ನಿಷೇಧಿಸಲಾಗಿದೆ’ ಎಂಬ ಫಲಕವನ್ನು ದೇವಾಲಯದ ಮುಂಭಾಗದಲ್ಲಿ ಹಾಕಿದೆ.

ಅಕ್ಟೋಬರ್ 19 ರಂದು ಮಾಂಕಾಲಿ ಅನಿಲ್ ಎಂಬಾತ ಹಸ್ತಾಪುರಂ ಮೌನಿಕಾ ಜೊತೆ ವಿವಾಹವಾಗಿದ್ದು, ಇದಕ್ಕೆ ಮೌನಿಕಾ ಕುಟುಂಬದವರ ವಿರೋಧವಿತ್ತು. ಹೀಗಾಗಿ ಮದುವೆ ದಿನದಂದೇ ದೇವಾಲಯಕ್ಕೆ ನುಗ್ಗಿದ್ದ ಆಕೆಯ ಕುಟುಂಬಸ್ಥರು, ಹಾಡಹಗಲೇ ಆತನ ಹತ್ಯೆ ಮಾಡಿದ್ದರು. ಈ ಹಿನ್ನಲೆಯಲ್ಲಿ ದೇವಾಲಯದಲ್ಲಿ ಇನ್ನು ಮುಂದೆ ಪ್ರೇಮ ವಿವಾಹ ನಡೆಸದಿರಲು ಆಡಳಿತ ಮಂಡಳಿ ತೀರ್ಮಾನಿಸಿದೆ.

ನವ ಜೋಡಿಗಳಿಂದ ಪ್ರತಿ ವಿವಾಹಕ್ಕೆ 5 ಸಾವಿರ ರೂ. ಪಡೆದು ಶಾಸ್ತ್ರೋಕ್ತವಾಗಿ ಇಲ್ಲಿ ವಿವಾಹ ನೆರವೇರಿಸಲಾಗುತ್ತಿತ್ತು. ಹೀಗಾಗಿ ಪೋಷಕರ ವಿರೋಧ ಎದುರಿಸುತ್ತಿದ್ದ ಪ್ರೇಮಿಗಳು, ಈ ದೇವಾಲಯಕ್ಕೆ ಬಂದು ವಿವಾಹವಾಗುತ್ತಿದ್ದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಹಲವು ಜೋಡಿಗಳು ಈ ಹಿಂದೆ ಇಲ್ಲಿ ವಿವಾಹವಾಗಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...