alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಪ್ರದೇಶದಲ್ಲಿ ಮೈಮರೆತ ಪ್ರೇಮಿಗಳ ವಿಡಿಯೋ ವೈರಲ್

ದಕ್ಷಿಣ ಮುಂಬೈನ ಮರೀನ್ ಡ್ರೈವ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ನೂರಾರು ಜನರು ಓಡಾಡ್ತಿದ್ದ ಜಾಗದಲ್ಲಿ ಪ್ರೇಮಿಗಳು ಮೈ ಮರೆತಿದ್ದಾರೆ. ಜನರು ಇವ್ರನ್ನು ನೋಡಿ ಫೋಟೋ, ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಶುಕ್ರವಾರ ವೈರಲ್ ಆಗಿದೆ.

ಕೆಲವರು ಪೊಲೀಸರಿಗೆ ಕರೆ ಮಾಡಿ ವಿಷ್ಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಬರುವ ಮೊದಲೇ ಅನೇಕರು ವಿಡಿಯೋ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಬರ್ತಿದ್ದಂತೆ ಭಯಗೊಂಡ ಜೋಡಿ ಬಟ್ಟೆ ಸರಿಪಡಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದೆ. ಆದ್ರೆ ಎಲ್ಲೆಡೆ ಟ್ರಾಫಿಕ್ ಇದ್ದಿದ್ದರಿಂದ ಹುಡುಗಿ ಪೊಲೀಸ್ ಕೈಗೆ ಸಿಕ್ಕಿದ್ದಾಳೆ. ಪುರುಷ ಮಾತ್ರ ತಪ್ಪಿಸಿಕೊಂಡಿದ್ದಾನೆ. ಆತ ವಿದೇಶಿ ವ್ಯಕ್ತಿಯಂತೆ ಕಾಣ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆ ಮಾನಸಿಕ ಸ್ಥಿತಿ ಸರಿಯಿಲ್ಲವಂತೆ. ಆಕೆಯನ್ನು ಮಹಿಳಾ ಸುರಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ಗೋವಾದವಳು ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ಪುರುಷನ ಪತ್ತೆಗೆ ಯತ್ನಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...