alex Certify
ಕನ್ನಡ ದುನಿಯಾ       Mobile App
       

Kannada Duniya

ಪಟೇಲ್ ಪ್ರತಿಮೆ ನಂತ್ರ ಭಾರತದಲ್ಲಿ ನಿರ್ಮಾಣವಾಗ್ತಿದೆ ಶಿವನ ಎತ್ತರದ ಪ್ರತಿಮೆ

ರಾಜಸ್ತಾನದ ನಾಥದ್ವಾರಾದಲ್ಲಿ ಭಗವಂತ ಶಿವನ 351 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗ್ತಿದೆ. ವಿಶ್ವದಲ್ಲಿಯೇ ಇದು ಅತ್ಯಂತ ಎತ್ತರದ ಶಿವನ ಪ್ರತಿಮೆಯಾಗಲಿದೆ. ಮುಂದಿನ ಮಾರ್ಚ್ ಒಳಗೆ ಶಿವನ ಮೂರ್ತಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಉದಯ್ಪುರದಿಂದ 50 ಕಿಲೋಮೀಟರ್ ದೂರದಲ್ಲಿರುವ ಗಣೇಶ್ ಟೇಕರಿ ಎಂಬಲ್ಲಿ ಸಿಮೆಂಟ್ –ಕಾಂಕ್ರಿಟ್ ನಿಂದ ಶಿವ ಮೂರ್ತಿ ನಿರ್ಮಾಣವಾಗ್ತಿದೆ. ಶೇಕಡಾ 85 ರಷ್ಟು ಮೂರ್ತಿ ನಿರ್ಮಾಣ ಪೂರ್ಣಗೊಂಡಿದೆ.

ವಿಶ್ವದಲ್ಲಿ ಅತ್ಯಂತ ಎತ್ತರದ ಶಿವನ ಪ್ರತಿಮೆಯಾಗಲಿದೆ. ಭಾರತದ ಅತ್ಯಂತ ಎತ್ತರದ ಎರಡನೇ ಪ್ರತಿಮೆಯಾಗಲಿದೆ. ಮೊದಲ ಸ್ಥಾನದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯಿರಲಿದೆ.

ಕಳೆದ ನಾಲ್ಕು ವರ್ಷಗಳಿಂದ ಪ್ರತಿಮೆ ನಿರ್ಮಾಣ ನಡೆಯುತ್ತಿದೆ. 750 ಕುಶಲಕರ್ಮಿಗಳು ಹಾಗೂ ಕಾರ್ಮಿಕರು ಪ್ರತಿನಿತ್ಯ ಶಿವನ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿಮೆಯಲ್ಲಿ ಭಗವಂತ ಶಿವ ಧ್ಯಾನ ಹಾಗೂ ಆರಾಮ ಮುದ್ರೆಯಲ್ಲಿ ಕಾಣಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...