alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ತಿ ತೆರಿಗೆ ಪಾವತಿಸದ ಹನುಮಂತನಿಗೆ ನೋಟಿಸ್

lord-hanuman-14ಭಗವಾನ್ ಶ್ರೀ ರಾಮನ ಭಂಟ ಹನುಮಂತ ಆಸ್ತಿ ತೆರಿಗೆ ಪಾವತಿಸಿಲ್ಲವೆಂಬ ಕಾರಣಕ್ಕೆ ಬಿಹಾರದ ಬೋಜಪುರ್ ಜಿಲ್ಲೆಯ ಆರಾ ಮುನ್ಸಿಪಲ್ ಕಾರ್ಪೋರೇಷನ್ ನೋಟಿಸ್ ನೀಡಿದೆ.

ಆರದಲ್ಲಿ ಹನುಮಂತನಿಗೆ ಸೇರಿದ ಮೂರು ಆಸ್ತಿಗಳಿದ್ದು, ಇದಕ್ಕೆ ತೆರಿಗೆಯಾಗಿ 4.33 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಿದೆ. ಹನುಮಂತ ದೇವಸ್ಥಾನದ ಆಡಳಿತ ಮಂಡಳಿಗೆ ಇದನ್ನು ಪಾವತಿಸುವಂತೆ ಹಲವು ಬಾರಿ ಸೂಚಿಸಿದರೂ ಅವರು ಕ್ಯಾರೆ ಅಂದಿಲ್ಲ.

ಈ ಮೂರೂ ಆಸ್ತಿಗಳು ಹನುಮಾನ್ ಹೆಸರಿನಲ್ಲಿದ್ದು, ಅನಿವಾರ್ಯವಾಗಿ ಆರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು, ಅದೇ ಹೆಸರಿಗೆ ನೋಟಿಸ್ ನೀಡಬೇಕಾಗಿ ಬಂದಿದೆ. ಹನುಮಂತನಿಗೆ ನೋಟಿಸ್ ನೀಡಿರುವುದರ ಕುರಿತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರೂ ಅಧಿಕಾರಿಗಳು ಮಾತ್ರ ಆಸ್ತಿ ಯಾರ ಹೆಸರಿನಲ್ಲಿದೆಯೋ ಅವರಿಗೇ ನೋಟಿಸ್ ನೀಡಬೇಕಾಗಿರುವ ಕಾರಣ ಹೀಗೆ ಮಾಡಿದ್ದೇವೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...