alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದಲ್ಲ ಎರಡಲ್ಲ 6 ಮದುವೆಯಾಗಿದ್ದಾಳೆ 19 ರ ಯುವತಿ…!

ಇತ್ತೀಚೆಗೆ ಬೆಳಕಿಗೆ ಬಂದ ಅಪರಾಧ ಪ್ರಕರಣವೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಕೇವಲ 19 ವರ್ಷದ ಯುವತಿ ಆರು ಮದುವೆಯಾಗಿದ್ದಾಳೆ. ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಯುವತಿಗೆ ಆಕೆ ತಂದೆ ಬೆಂಬಲವೂ ಇತ್ತೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ರಾಮಕೃಷ್ಣ ಎಂಬ ವ್ಯಕ್ತಿ, ಆರೋಪಿ 19 ವರ್ಷದ ಮೋನಿಕಾ ಜೊತೆ ಮೂರು ತಿಂಗಳ ಹಿಂದೆ ಮದುವೆಯಾಗಿದ್ದನಂತೆ. ಮೋನಿಕಾ ತಂದೆ ಮದುವೆಯಾದ ಕೆಲ ದಿನಗಳಲ್ಲಿಯೇ ಮಗಳನ್ನು ತವರಿಗೆ ವಾಪಸ್ ಕಳುಹಿಸುವಂತೆ ಒತ್ತಾಯ ಮಾಡಿದ್ದನಂತೆ. ತವರಿಗೆ ಹೊರಟ ಮೋನಿಕಾ, ಮನೆಯಲ್ಲಿದ್ದ ಒಡವೆ, ವಸ್ತುಗಳನ್ನು ದೋಚಿದ್ದಳಂತೆ. ನಂತ್ರ ರಾಮಕೃಷ್ಣನ ಮನೆಗೆ ವಾಪಸ್ ಬರಲಿಲ್ಲ.

ರಾಮಕೃಷ್ಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಎನ್ನಲಾಗಿದೆ. ರಾಮಕೃಷ್ಣನೊಬ್ಬನೇ ಅಲ್ಲ ಹೀಗೆ ಐದು ಮಂದಿಯನ್ನು ಹುಡುಗಿ ಮದುವೆಯಾಗಿ ಮೋಸ ಮಾಡಿದ್ದಾಳೆ. ಮದುವೆ ನಾಟಕವಾಡಿ ಹಣ ದೋಚೋದು ಈಕೆ ವೃತ್ತಿಯಾಗಿತ್ತಂತೆ. ತನಿಖೆ ಶುರು ಮಾಡಿದ್ದ ಪೊಲೀಸ್ ಕೈಗೆ ಆರೋಪಿ ಮೋನಿಕಾ ಸಿಕ್ಕಿಬಿದ್ದಿದ್ದಾಳೆ. ತನ್ನ ಬೆಂಬಲಕ್ಕೆ ತಂದೆಯಿದ್ದ ಎಂದು ಮೋನಿಕಾ ಬಾಯ್ಬಿಟ್ಟಿದ್ದು, ಆತನನ್ನೂ ಬಂಧಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...