alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕನ ಪ್ರಾಣ ಉಳಿಸಿದ ಚಾಕೊಲೆಟ್

tower-dd

ಅಹಮದಾಬಾದ್: ಮಾನಸಿಕ ಅಸ್ವಸ್ಥನೊಬ್ಬ ಜಿಯೊ ಮೊಬೈಲ್ ಟವರ್ ಏರಿದ್ದು, ಚಾಕೊಲೆಟ್ ತೋರಿಸಿ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

17 ವರ್ಷ ವಯಸ್ಸಿನ ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಆತನ ಕುಟುಂಬದ ಹಿನ್ನಲೆ ಕೂಡ ತಿಳಿದಿಲ್ಲ. ತನ್ನ ಹೆಸರೇನು ಎಂಬುದು ಕೂಡ ಆತನಿಗೆ ಗೊತ್ತಿಲ್ಲ.

ಶನಿವಾರ ಈ ಯುವಕ ಅಹಮದಾಬಾದ್ ಸೈನ್ಸ್ ಸಿಟಿ ಏರಿಯಾದಲ್ಲಿರುವ ರಿಲಯನ್ಸ್ ಜಿಯೋ ಮೊಬೈಲ್ ಟವರ್ ಏರಿದ್ದಾನೆ.

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ಸಿಬ್ಬಂದಿ, ಸಾರ್ವಜನಿಕರು ಯುವಕನ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸ್ವಲ್ಪ ಯಡವಟ್ಟಾಗಿದ್ದರೂ, ಯುವಕ ಟವರ್ ಮೇಲಿಂದ ಬಿದ್ದು ಪ್ರಾಣಕಳೆದುಕೊಳ್ಳುವ ಅಪಾಯವಿತ್ತು. ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಮುಂದಾದ ರಕ್ಷಣಾ ತಂಡದಲ್ಲಿದ್ದ ಮಿಥೇಶ್, ಚಾಕೊಲೆಟ್ ಕೊಡುವುದಾಗಿ ಹೇಳಿದ್ದಾರೆ.

ಯುವಕ ಚಾಕೊಲೆಟ್ ಕೊಡುವುದಾದರೆ ನೀವು ಹೇಳಿದಂತೆ ಕೇಳುತ್ತೇನೆ ಎಂದು ತಿಳಿಸಿದ್ದಾನೆ. ಅವನಿಗೆ ಚಾಕೊಲೆಟ್ ಆಸೆ ತೋರಿಸಿ ಕ್ರೇನ್ ಸಹಾಯದಿಂದ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.

ಭರವಸೆ ನೀಡಿದಂತೆ ಚಾಕೊಲೆಟ್ ಕೊಡಿಸಲಾಗಿದೆ. ಮಿಥೇಶ್ ಕಳೆದ 1 ತಿಂಗಳ ಅವಧಿಯಲ್ಲಿ ಇಂತಹ 3 ನೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಯುವಕನ ಪೋಷಕರನ್ನು ಪತ್ತೆ ಮಾಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...