alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ದವ್ ಠಾಕ್ರೆ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಾಹುಲ್

ಚುನಾವಣೆ ಹಾಗೂ ಮೈತ್ರಿಗೆ ಸಾಮಾಜಿಕ ತಾಣಗಳು ಪರೋಕ್ಷ ಸಂದೇಶ ನೀಡುತ್ತವೆ ಎಂಬುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ. ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ತಮ್ಮ ಜನ್ಮದಿನ ಆಚರಿಸಿಕೊಂಡ್ರು. ಉದ್ಧವ್ ಗೆ ಶುಭ ಕೋರಿ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ರಾಹುಲ್ ಟ್ವೀಟ್ ನಲ್ಲಿ, ಉದ್ಧವ್ ಠಾಕ್ರೆಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ರು. ಅಲ್ಲದೇ ಉತ್ತಮ ಆರೋಗ್ಯ ಹಾಗೂ ಖುಷಿಯನ್ನು ಕೇಳಿಕೊಳ್ಳುತ್ತೇನೆ ಎಂದು ಬರೆದಿದ್ದರು.

ಶಿವಸೇನಾ ಹಾಗೂ ಬಿಜೆಪಿ ನಡುವಿನ ತಿಕ್ಕಾಟ ಇನ್ನು ಬಗೆ ಹರಿದಿಲ್ಲ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್ ಮಾಡಿರೋದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಕಾಂಗ್ರೆಸ್ ಹಾಗೂ ಶಿವಸೇನಾ ತತ್ವ ಸಿದ್ಧಾಂತಗಳು ಬೇರೆ ಆಗಿದ್ದು, ಬದಲಾಗುತ್ತಿರುವ ರಾಜಕೀಯ ಲೆಕ್ಕಾಚಾರದಲ್ಲಿ ಯಾವ ದಾಳವನ್ನು ಯಾವ ಪಕ್ಷ ಬಳಸುತ್ತದೆ ಎಂಬ ಕುತೂಹಲ ಮನೆ ಮಾಡಿದೆ. ಇನ್ನು ರಾಹುಲ್ ಮಾಡಿದ ಟ್ವೀಟನ್ನು 5 ಸಾವಿರ ಜನ ಲೈಕ್ ಮಾಡಿದ್ದು, 1200 ಜನ ರೀ ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...