alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಏರುವ ಕೆಲ ನಿಮಿಷದ ಮುನ್ನ ಟ್ರಯಲ್ ರೂಂ ನಲ್ಲಿ ಸಿಕ್ಕಿ ಬಿದ್ದಿದ್ದ ಪ್ರಯಾಣಿಕ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಹೊರಡುವ ಕೆಲ ನಿಮಿಷದ ಮುನ್ನ ಶರ್ಟ್ ಬದಲಾಯಿಸಲು ಟ್ರಯಲ್ ರೂಮಿಗೆ ಹೋಗಿದ್ದು, ಈ ವೇಳೆ ಲಾಕ್ ಆದ ಕಾರಣ ಒಳಗೆ ಸಿಕ್ಕಿ ಬಿದ್ದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಫೆಬ್ರವರಿ 16 ರಂದು ಟರ್ಮಿನಲ್ 3 ರ ಬಳಿ ಈ ಘಟನೆ ನಡೆದಿದ್ದು, ವರ್ಜಿನ್ ಅಟ್ಲಾಂಟಿಕ್ ವಿಮಾನದಲ್ಲಿ ಲಂಡನ್ ಗೆ ತೆರಳುತ್ತಿದ್ದ ಈ ಪ್ರಯಾಣಿಕರು ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ವಿಮಾನ ಏರುವ ಕೆಲ ನಿಮಿಷದ ಮುನ್ನ ಟ್ರಯಲ್ ರೂಮಿಗೆ ತೆರಳಿದ್ದಾರೆ.

ಹೊರ ಬರುವ ವೇಳೆ ಲಾಕ್ ಆಗಿದ್ದು, ತೆರೆಯಲೆತ್ನಿದರೂ ಅದು ಸಾಧ್ಯವಾಗದ ಕಾರಣ ವಿಮಾನ ಮಿಸ್ ಆಗುವ ಆತಂಕ ಎದುರಾಗಿದೆ. ಜೋರಾಗಿ ಕೂಗಿಕೊಳ್ಳಲಾರಂಭಿಸಿದ ಈ ಪ್ರಯಾಣಿಕ ತುರ್ತು ಸಹಾಯವಾಣಿ 100 ಕ್ಕೂ ಕರೆ ಮಾಡಿದ್ದಾರೆ. ಇವರ ಕೂಗಾಟ ಕೇಳಿ ಸ್ಥಳಕ್ಕೆ ಬಂದ ವಿಮಾನ ನಿಲ್ದಾಣದ ಸಿಬ್ಬಂದಿ ಡೋರ್ ತೆಗೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ಕೂಡಲೇ ಈ ಪ್ರಯಾಣಿಕ ಹೊರಡಬೇಕಿದ್ದ ವಿಮಾನದ ಪೈಲೆಟ್ ಗೂ ಮಾಹಿತಿ ನೀಡಿದ್ದು, ಪರಿಣಿತರನ್ನು ಕರೆಸಿ ಲಾಕ್ ಮುರಿದು ಡೋರ್ ತೆಗೆಯಲಾಗಿದೆ. ಪ್ರಯಾಣಿಕನಿಗಾದ ಅನಾನೂಕೂಲಕ್ಕೆ ವಿಷಾದ ವ್ಯಕ್ತಪಡಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು, ಆತ ಹೊರಡಬೇಕಿದ್ದ ವಿಮಾನಕ್ಕೆ ಹತ್ತಿಸಿ ನಿಟ್ಟುಸಿರುಬಿಟ್ಟಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಹಿಂದೆಯೂ ಇಂತಹ ಘಟನೆ ನಡೆದಿದ್ದು, ಫೆಬ್ರವರಿ 5 ರಂದು ದುಬೈಗೆ ಹೊರಡಬೇಕಿದ್ದ ಪ್ರಯಾಣಿಕರೊಬ್ಬರು ವಾಶ್ ರೂಂ ನಲ್ಲಿ ಸಿಕ್ಕಿ ಬಿದ್ದಿದ್ದರು. ಹೀಗಾಗಿ ನಿಲ್ದಾಣದ ಡೋರ್ ಲಾಕ್ ಗಳ ಸ್ಥಿತಿಗತಿಗಳನ್ನು ಮರು ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...