alex Certify
ಕನ್ನಡ ದುನಿಯಾ       Mobile App
       

Kannada Duniya

ತಾನು ಬದುಕಿದ್ದೇನೆಂದು ಈತ ಸಾರಿ ಸಾರಿ ಹೇಳುತ್ತಿದ್ದರೂ ಕೇಳುತ್ತಿಲ್ಲ ಅಧಿಕಾರಿಗಳು

ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಬದುಕಿರುವ ವ್ಯಕ್ತಿಯನ್ನು ಸತ್ತಿದ್ದಾನೆ ಎಂದು ಘೋಷಿಸಲಾಗಿದೆ. ಯಾವುದೋ ಕಾಗದ ಪತ್ರ ತರಲೆಂದು ದೇವೇಂದ್ರ ಕುಮಾರ್ ಬ್ಯಾಂಕ್ ಗೆ ಬಂದಿದ್ದ. ಆದ್ರೆ ಬ್ಯಾಂಕ್ ದಾಖಲೆಗಳಲ್ಲಿ ಆತ ಮೃತಪಟ್ಟಿದ್ದಾನೆಂದು ನಮೂದಾಗಿತ್ತು.

ತಾನು ಬದುಕಿರುವಾಗ್ಲೇ ಕಂದಾಯ ಇಲಾಖೆ ಸತ್ತಿದ್ದಾನೆಂದು ದಾಖಲೆಗಳಲ್ಲಿ ಬರೆದಿರುವುದನ್ನು ನೋಡಿ ದೇವೇಂದ್ರ ಕುಮಾರ್ ದಿಗ್ಭ್ರಾಂತನಾಗಿದ್ದ. ತಾನಿನ್ನೂ ಬದುಕಿದ್ದೇನೆ, ಅಗತ್ಯ ದಾಖಲೆಗಳು ನನ್ನ ಬಳಿಯಿವೆ ಅಂತಾ ಬ್ಯಾಂಕ್ ಅಧಿಕಾರಿಗಳಿಗೆ ದೇವೇಂದ್ರ ತಿಳಿಸಿದ್ದಾನೆ.

ಹಾಗೇನಾದ್ರು ಮಾಡಿದ್ರೆ ಪೊಲೀಸರನ್ನು ಕರೆಸಿ ಜೈಲಿಗೆ ಕಳಿಸೋದಾಗಿ ಬ್ಯಾಂಕ್ ನವರು ಬೆದರಿಸಿದ್ದಾರೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾದ ಬಳಿಕ ಫಿರೋಜಾಬಾದ್ ನ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ನೇಹಾ ಶರ್ಮಾ ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...