alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ-ಪಿಡಿಪಿ ಮೈತ್ರಿ ಮುರಿಯುತ್ತಿದ್ದಂತೆ ಶುರುವಾಯ್ತು ‘ಆಪರೇಷನ್ ಆಲ್ ಔಟ್’

ಜಮ್ಮು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಪತನವಾಗ್ತಿದ್ದಂತೆ ಕೇಂದ್ರ ಭದ್ರತಾ ಪಡೆ ಕಾರ್ಯಾಚರಣೆ ಶುರು ಮಾಡಿದೆ. ಕಣಿವೆಯಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರ ಪಟ್ಟಿಯನ್ನು ಭದ್ರತಾ ಪಡೆ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ 180 ಭಯೋತ್ಪಾದಕರ ಹೆಸರಿದೆ.

ಪಟ್ಟಿಯಲ್ಲಿರುವ 170 ಭಯೋತ್ಪಾದಕರು ಹಿಜಬುಲ್ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಕಣಿವೆಯಲ್ಲಿ ಭೀತಿ ಹುಟ್ಟಿಸುತ್ತಿರುವ 50 ವಿದೇಶಿ ಭಯೋತ್ಪಾದಕರ ಹೆಸರು ಪಟ್ಟಿಯಲ್ಲಿ ಸೇರಿದೆ. ರಂಜಾನ್ ಸಂದರ್ಭದಲ್ಲಿ ಭಯೋತ್ಪಾದನೆ ಹಾದಿ ತುಳಿದ 40 ಭಯೋತ್ಪಾದಕರ ಹೆಸರು ಇದ್ರಲ್ಲಿದೆ ಎನ್ನಲಾಗ್ತಿದೆ.

ಭಯೋತ್ಪಾದಕರನ್ನು ಬಗ್ಗು ಬಡಿಯಲು ಭದ್ರತಾ ಪಡೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಭಯೋತ್ಪಾದಕರ ಹುಡುಕಾಟ ಶುರುವಾಗಿದೆ. ವಿದೇಶಿ ಭಯೋತ್ಪಾದಕರನ್ನು ನೆಲಕ್ಕುರುಳಿಸಲು ಭದ್ರತಾ ಪಡೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ. ಈಗಷ್ಟೇ ಭಯೋತ್ಪಾದಕ ಸಂಘಟನೆ ಜೊತೆ ಕೈ ಜೋಡಿಸಿರುವ ಯುವಕರ ಮನಪರಿವರ್ತನೆ ಮಾಡುವ ತಯಾರಿ ನಡೆದಿದೆ.

ಕಳೆದ ಐದು ತಿಂಗಳಿಂದ ಕಣಿವೆ ಗ್ರಾಮದಲ್ಲಿ ಸುಮಾರು 150 ಯುವಕರು ನಾಪತ್ತೆಯಾಗಿದ್ದಾರೆ. ಇದ್ರಲ್ಲಿ ಅನೇಕ ಯುವಕರು ಭಯೋತ್ಪಾದಕರ ಜೊತೆ ಕೈ ಜೋಡಿಸಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...