alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 6 ಗಂಟೆ ಬಾಗಿಲು ತೆರೆಯಲಿದೆ ಮದ್ಯದಂಗಡಿ

up_1024_1492508093_749x421

ಉತ್ತರಾಖಂಡದಲ್ಲಿ ನಡೆಯುತ್ತಿರುವ ಮದ್ಯ ವಿರೋಧಿ ಹೋರಾಟದ ನಡುವೆ ಸಿಎಂ ತ್ರಿವೆಂದರ್ ಸಿಂಗ್ ರಾವತ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದ್ರ ಪ್ರಕಾರ ಇನ್ಮುಂದೆ ದಿನದಲ್ಲಿ ಕೇವಲ 6 ಗಂಟೆ ಮಾತ್ರ ಮದ್ಯದಂಗಡಿ ಬಾಗಲು ತೆರೆಯಲಿದೆ.

ಈವರೆಗೆ ಉತ್ತರಖಂಡದಲ್ಲಿ ಮದ್ಯದಂಗಡಿಗಳು 14 ಗಂಟೆ ತೆರೆದಿರುತ್ತಿದ್ದವು. ಆದ್ರೆ ಇನ್ಮುಂದೆ ಕೇವಲ 6 ಗಂಟೆ ಮಾತ್ರ ಮದ್ಯದಂಗಡಿ ತೆರೆದಿರಲಿದೆ ಎಂದು ಅಬಕಾರಿ ಸಚಿವ ಜೈ ಪ್ರತಾಪ್ ಸಿಂಗ್ ಹೇಳಿದ್ದಾರೆ.

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಮದ್ಯ ನಿಷೇಧ ಮಾಡುವ ಯಾವುದೇ ಯೋಚನೆ ಇಲ್ಲ ಎಂದವರು ಹೇಳಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಅಂಗಡಿ ತೆರೆದಿರಲಿದೆ. ಈ ಹಿಂದೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮದ್ಯದಂಗಡಿ ಬಾಗಿಲು ತೆರೆದಿರುತ್ತಿತ್ತು. ಸರ್ವೋಚ್ಛ ನ್ಯಾಯಾಲಯದ ಆದೇಶದ ನಂತ್ರ ದೇಶದಾದ್ಯಂತ ಸುಮಾರು 5 ಸಾವಿರಕ್ಕೂ ಹೆಚ್ಚು ಮದ್ಯದಂಗಡಿಗಳು ಬಾಗಿಲು ಮುಚ್ಚಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...